ಕರಾವಳಿ

ಕಾಡಿನಿಂದ ಮನೆಯಂಗಳಕ್ಕೆ ಬಂದ ಕಾಳಿಂಗ ಸರ್ಪ ರಕ್ಷಣೆ, ಮತ್ತೆ ಕಾಡು ಸೇರಿದ ಕಾಳಿಂಗ..!

Pinterest LinkedIn Tumblr

ಕುಂದಾಪುರ: ಕಾಡಿನಿಂದ ಜನನಿಬಿಡ ಪ್ರದೇಶಕ್ಕೆ ಬಂದ ಕಾಳಿಂಗ ಸರ್ಪ ರಕ್ಷಣೆ ಮಾಡಿರುವ ಘಟನೆ ಕುಂದಾಪುರ ತಾಲೂಕು ವ್ಯಾಪ್ತಿಯ ಸಿದ್ಧಾಪುರದಲ್ಲಿ ನಡೆದಿದೆ.

ಸಿದ್ದಾಪುರ ಸಮೀಪದ ಗೆದ್ದೋಡು ಎಂಬಲ್ಲಿ ಗುರುವಾರ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು. ಶುಕ್ರವಾರ ಪುನಃ ಪರಿಸರದಲ್ಲಿ ಗೋಚರಿಸಲಿಲ್ಲ. ಶನಿವಾರ ಬೆಳಿಗ್ಗೆ ಮನೆ ಸಮೀಪದ ಶೆಡ್ ನಲ್ಲಿ ಕಾಣಿಸಿಕೊಂಡಿದ್ದು ಮನೆಯಂಗಳದಲ್ಲಿ ಸುತ್ತಾಡಿದೆ.

ಮನೆಯವರು ಸಂಬಂದಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದು 11 ಅಡಿ ಉದ್ದದ ಗಂಡು ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉರಗ ತಜ್ಞ ನಾಗರಾಜ ನಾಯ್ಕ್ ಅಲ್ಬಾಡಿ ರಕ್ಷಣೆ ಮಾಡಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Comments are closed.