ಕುಂದಾಪುರ: ವಕ್ವಾಡಿ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಮತ್ತು ಹಸ್ತಚಿತ್ತ ಫೌಂಡೇಶನ್ ವಕ್ವಾಡಿ ಇವರ ಆಶ್ರಯದಲ್ಲಿ ಆ. 7ರಂದು ಸಂಜೆ ವಕ್ವಾಡಿ ವಿಲೇಜ್ ಹೊಟೇಲ್ನ ಕನಕ ಸಭಾಂಗಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ| ವಿ. ಕೆ. ಐತಾಳ್ (ವಕ್ವಾಡಿ ಕೃಷ್ಣ ಐತಾಳ್) ಅವರ ಸ್ಮರಣಾರ್ಥ ಹರ್ ಘರ್ ತಿರಂಗಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ವಕ್ವಾಡಿ ಮೂಲದ ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ನಮ್ಮೂರ ಸ್ವಾತಂತ್ರ್ಯ ಹೋರಾಟಗಾರ ದಿ| ವಿ. ಕೆ. ಐತಾಳ್ ಅವರ ಸ್ಮರಣಾರ್ಥ ವಕ್ವಾಡಿಯ ಪ್ರತಿ ಮನೆಯಲ್ಲೂ ದೇಶದ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ತ್ರಿವರ್ಣ ಧ್ವಜ ಹಾರಿಸುವ ಸಲುವಾಗಿ ಹಮ್ಮಿಕೊಂಡ ಕಾರ್ಯಕ್ರಮ ದೇಶಭಕ್ತಿಯ ಸಂಕೇತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ನೀಡಿದ ಕರೆಯನ್ನು ಗೌರವಿಸಿ ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರತಿಯೋರ್ವರಿಗೂ ಇದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ ವಕ್ವಾಡಿ ರಾಷ್ಟ್ರಧ್ವಜದ ಮಹತ್ವವಿವರಿಸಿ ದಿ| ವಿ. ಐತಾಳರ ದೇಶಪ್ರೇಮದ ಬಗ್ಗೆ ಸ್ಮರಿಸಿದರು. ವೇದಿಕೆಯಲ್ಲಿ ಹಸ್ತಚಿತ್ತ ಫೌಂಡೇಶನ್ ಕಾರ್ಯದರ್ಶಿ ಶಂಕರ ಮೂರ್ತಿ ಮಂಜ, ವಿ.ಕೆ ಐತಾಳ್ ಅವರ ಕುಟುಂಬಿಕರಾದ ಲೀಲಾವತಿಯಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾಗಿದ್ದ ದಿ| ವಿ. ಕೆ. ಐತಾಳ್ ಅವರ ಮಕ್ಕಳಾದ ಗಿರೀಶ್ ಐತಾಳ್, ಮಹೇಶ್ ಐತಾಳ್, ವಾಣಿ ಐತಾಳ್ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಕಾಳಾವರ ಗ್ರಾ.ಪಂ. ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಮಾಜಿ ಸದಸ್ಯ ಸತೀಶ್ ಪೂಜಾರಿ ವಕ್ವಾಡಿ ಮಾತನಾಡಿದರು. ನಾಗರತ್ನಾ ಹೇರ್ಳೆ ನಿರೂಪಿಸಿ, ಅಕ್ಷತಾ ಗಿರೀಶ್ ಐತಾಳ್ ವಂದಿಸಿದರು.
ಲೀಲಾವತಿ ಐತಾಳ್ ಕುಟುಂಬ, ಗಣೇಶೋತ್ಸವ ಸಮಿತಿ ವಕ್ವಾಡಿ, ಆಸರೆ ಟ್ರಸ್ಟ್ ವಕ್ವಾಡಿ, ವಕ್ವಾಡಿ ಫ್ರೆಂಡ್ಸ್, ಯುವಶಕ್ತಿ ಮಿತ್ರ ಮಂಡಳಿ, ಚಿತ್ತಾರಿ ನಾಗಬ್ರಹ್ಮ ರಕೇಶ್ವರೀ ಭಜನ ಮಂಡಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ವಕ್ವಾಡಿ ಹಾಗೂ ನವನಗರ, ವಿಶ್ವ ಬ್ರಾಹ್ಮಣ ಸಂಘ, ಹಾಲು ಉತ್ಪಾದಕರ ಸಂಘ, ದೇವರಾಡಿ ಫ್ರೆಂಡ್ಸ್ ವಕ್ವಾಡಿ ಸಹಕರಿಸಿದರು.
Comments are closed.