ಕರಾವಳಿ

ಪ್ರವೀಣ್​ ​ನೆಟ್ಟಾರು ಹತ್ಯೆ ಪ್ರಕರಣ; ಮೂವರು ಪ್ರಮುಖ ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರ್​ ಹತ್ಯೆ ಪ್ರಕರಣದ ಬಗ್ಗೆ ಪ್ರಮುಖ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಪ್ರಮುಖ ಆರೋಪಿಗಳಾದ ಶಿಯಾಬ್, ಬಶೀರ್ ಮತ್ತು ರಿಯಾಜ್ ಎಂಬವರನ್ನು ಬಂಧಿಸಲಾಗಿದ್ದು ಈವರೆಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10 ಕ್ಕೆ ಏರಿದೆ.

ಪ್ರಮುಖ ಮೂವರು ಆರೋಪಿಗಳು ಆರು ಜಿಲ್ಲೆಯಲ್ಲಿ ಈವರೆಗೆ ಕಣ್ತಪ್ಪಿಸಿ ಓಡಾಟ ನಡೆಸುತ್ತಿದ್ದು, ಬೆಳ್ಳಾರೆ ಆಸುಪಾಸಿನವರೇ ಈ ಕೃತ್ಯದಲ್ಲಿ ಭಾಗಿಯದವರು ಎಂದು ತಿಳಿದುಬಂದಿದೆ. ಹಂತಕರು ಸಾಕಷ್ಟು ವ್ಯವಸ್ಥಿತ ತಯಾರಿ ನಡೆಸಿ ಸಂಚು ರೂಪಿಸಿ ಪ್ರವೀಣ್​​ ಹತ್ಯೆ ನಡೆಸಿದ್ದಾರೆ. ಹತ್ಯೆಗೆ ಬೈಕ್ ನೀಡಿದ್ದ ಆರೋಪಿ ಸುಳ್ಯದ ಕಬೀರ್​ನನ್ನು ಆಗಸ್ಟ್​ 9ರಂದು ಬಂಧಿಸಲಾಗಿದೆ. ತನ್ನ‌ ಪರಿಚಯಸ್ಥನ ಬೈಕ್ ಪಡೆದಿದ್ದ ಕಬೀರ್​, ಅದನ್ನು ಹಂತಕರಿಗೆ ನೀಡಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಸದ್ಯ ಪ್ರಕರಣ ಪ್ರಮುಖ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Comments are closed.