(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ತಡರಾತ್ರಿ ತನಕ ಮಣಿಪಾಲದ ಪಬ್ ಒಂದರಲ್ಲಿ ಪಾರ್ಟಿಮಾಡಿದ ತಂಡ ತಮ್ಮ ಇನ್ನೋವಾ ಕಾರನ್ನು ತೆಗೆದುಕೊಂಡು ಹೋಗುವಾಗ ಇತರ ಕಾರುಗಳ ಸಹಿತ ಪಬ್ ನೌಕರನಿಗೆ ಗುದ್ದಿಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಸಿದ ಘಟನೆ ಸೆ.3 ರಂದು ರಾತ್ರಿ ಮಣಿಪಾಲದಲ್ಲಿ ನಡೆದಿದೆ.
ಅಪಘಾತ ಪಡಿಸಿದ ಇನ್ನೋವಾ ಕಾರ್ ಚಾಲಕ ಸುಹಾಸ್ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆತನನ್ನು ಬಂಧಿಸಲಾಗಿದೆ.
ಇಲ್ಲಿನ ಬ್ಯಾರೆಲ್ಸ್ ಪಬ್‌ಗೆ ಗ್ರಾಹಕನಾಗಿ ಬಂದಿದ್ದ ಸುಹಾಸ್ ಮತ್ತವನತಂಡ ಪಾರ್ಟಿ ಮುಗಿಸಿ ಪಬ್ ನಿಂದ ಹೊರಗೆ ಹೋಗುವಾಗ ತನ್ನ ಇನ್ನೊವಾ ಕಾರ್‌ನ್ನು ಕುಡಿದ ಮತ್ತಿನಲ್ಲಿ, ಹಿಮ್ಮುಖವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದು ಬ್ಯಾರೆಲ್ಸ್ ಪಬ್ ನೌಕರ ವಿಕ್ರಾಂತ್ ಎಂಬುವವರ ಕಾಲಿಗೆ ಗಾಯವಾಗಿದೆ. ಅಲ್ಲದೆ ಪಾರ್ಕಿಂಗ್‌ನಲ್ಲಿದ್ದ ಸ್ಕೋಡಾ ಮತ್ತು ಪಾರ್ಚೂನರ್ ವಾಹನಕ್ಕೆ ಅಪಘಾತಪಡಿಸಿದ್ದಾನೆ.
ಜಿ.ಎ. 08 ಎಫ್ 3693 ಕಪ್ಪು ಬಣ್ಣದ ಇನ್ನೋವಾ ಕಾರ್‌ನ ಚಾಲಕ ಸುಹಾಸ್ ವಾಹನ ಚಾಲನೆಯ ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದು ದೃಢಪಟ್ಟಿದ್ದು ಇನ್ನಿತರೆ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊವಾ ಕಾರ್‌ನಲ್ಲಿದ್ದ ಸುಹಾಸ್ ಹಾಗೂ ಆತನ ಸ್ನೇಹಿತರಾದ ಭರತ್, ನವೀನ್ ಕಲ್ಯಾಣ್, ಇಬ್ಬರು ಯುವತಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇವರೆಲ್ಲರೂ ಬೆಂಗಳೂರು ಮತ್ತು ಶಿವಮೊಗ್ಗದ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಐಟಿ ಸೆಕರ್‌ನಲ್ಲಿ ನೌಕರಿ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇವರೆಲ್ಲರೂ ಸಂಬಂಧಿಕರ ಮದುವೆಗೆ ಉಡುಪಿಗೆ ಬಂದಿದ್ದು ರಾತ್ರಿ ಪಬ್‌ಗೆ ಭೇಟಿ ನೀಡಿದ್ದರು.
ಈ ಅಪಘಾತದಿಂದ ಸ್ಕೋಡಾ ಕಾರ್ ಮತ್ತು ಪಾರ್ಚೂನರ್ ಕಾರು ಜಖಂಗೊಂಡಿದ್ದು ಪಾರ್ಚೂನ್ ಕಾರ್ ಚಾಲಕ ರೋಶನ್ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.
Comments are closed.