ಕರಾವಳಿ

ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮಹಾಸಭೆ; ಸಾಧಕರಿಗೆ ಸನ್ಮಾನ, ಪ್ರತಿಭಾನ್ವಿತರಿಗೆ ವಿದ್ಯಾರ್ಥಿವೇತನ

Pinterest LinkedIn Tumblr

ಕುಂದಾಪುರ: ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಸಹಕಾರಿ ಸಂಘವನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಸಮಾಜದಲ್ಲಿ ಸಮಾಜದ ಸಂಘಟನೆ ಮಾಡಲು ಸಹಕಾರಿ ಸಂಘದಂತಹ ಉತ್ತಮ ವೇದಿಕೆಯಿಂದ ಮಾತ್ರ ಸಾಧ್ಯ. ಅಂದು ಸರಕಾರ ಮತ್ತು ಸಹಕಾರಿ ಸಂಘದ ಎಲ್ಲಾ ಮಾನದಂಡದೊಂದಿಗೆ ಸಮಾಜ ಬಾಂಧವರಿಗಾಗಿ ಮಾಡಿದ ಸಂಸ್ಥೆಯಿದು ಎಂದು ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ನಾಗಪ್ಪ ಕೊಠಾರಿ ಹೇಳಿದರು.

ಕುಂದಾಪುರದಲ್ಲಿರುವ ರಾಜ್ಯ ಸರಕಾರಿ ನೌಕರರ ಕಟ್ಟಡದಲ್ಲಿನ ನೇತಾಜಿ ಸಭಾಭವನದಲ್ಲಿ ಭಾನುವಾರ ನಡೆದ ಕುಂದಾಪುರ ಭಂಡಾರ್ಕಾರ್ಸ್ ರಸ್ತೆಯಲ್ಲಿನ ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ 2021-22ನೇ ಸಾಲಿನ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾನಂಜೆ ಸಹಕಾರಿ ಸಂಘದ ನಿವೃತ್ತ ಜನರಲ್ ಮ್ಯಾನೇಜರ್ ಶ್ರೀನಿವಾಸ, ಮಾನಂಜೆ ಸಹಕಾರಿ ಸಂಘದಲ್ಲಿ ಉನ್ನತ ಹುದ್ದೆಗೇರಿದ ಶಂಕರ್ ಕೊಠಾರಿ,  ಫವರ್ ಲಿಪ್ಟರ್ ಆಗಿ ಸಾಧನೆ ಮಾಡಿದ ಸತೀಶ್ ಖಾರ್ವಿ, ಸಂಸ್ಥೆಯ ಉತ್ತಮ ಗ್ರಾಹಕರ ನೆಲೆಯಲ್ಲಿ ಲಕ್ಷಣ ಕೊಠಾರಿ, ಪತ್ರಕರ್ತ ಎಂ.ಎನ್ ಕೊಠಾರಿ, ಕೃಷಿಕರಾದ ಬಾಬು ಕೊಠಾರಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಅನಾರೋಗ್ಯ‌ ಸಮಸ್ಯೆಯಿರುವ ಬಡ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಲಾಯಿತು.

ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ‌ ಉಪಾಧ್ಯಕ್ಷ ಶಂಕರ ಕೊಠಾರಿ ಯಡ್ತರೆ,  ನಿರ್ದೇಶಕರಾದ ವೈ. ರಾಜು ಕೊಠಾರಿ, ಚಂದ್ರಶೇಖರ ಕೊಠಾರಿ, ನಾರಾಯಣ ಕೊಠಾರಿ, ಯು. ಶೀನಾ ಕೊಠಾರಿ,  ಬಿ. ಸೀತಾರಾಮ ಕೊಠಾರಿ, ಬಾಬು ಕೊಠಾರಿ, ಬಾಬಿ ಕೊಠಾರಿ, ವೃತ್ತಿ ಪರಿಣಿತ ನಿರ್ದೇಶಕ ಶಂಕರ ಕೊಠಾರಿ ಕಂಚಾರು, ಹಿರಿಯರಾದ ಮಹಾಲಿಂಗ ಮಾಸ್ಟರ್, ಸಲಹಾ ಸಮಿತಿಯಲ್ಲಿರುವ ರವಿ ಗಾಣಿಗ ಮೊದಲಾದವರು ಇದ್ದರು.

ಅರ್ಚನ, ಸೌಭಾಗ್ಯ, ಚೈತನ್ಯ ಪ್ರಾರ್ಥಿಸಿ, ಕಾರ್ಯಕ್ರಮವನ್ನು ಕುಂದಾಪುರ ಶ್ರೀ ಸೀತಾರಾಮ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಶೇಖರ ಕೊಠಾರಿ ಮತ್ತು ನಾರಾಯಣ ಕೊಠಾರಿ ನಿರೂಪಿಸಿದರು. ಮಂಜು ಕೊಠಾರಿ ಸ್ವಾಗತಿಸಿ, ಗಿರೀಶ್ ಕೊಠಾರಿ ವಂದಿಸಿದರು.

Comments are closed.