ಕರಾವಳಿ

ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ವಿಧಿವಶ

Pinterest LinkedIn Tumblr

ಬೆಂಗಳೂರು: ಅರಣ್ಯ, ಆಹಾರ ಮತ್ತು ನಾಗರಿಕ ಇಲಾಖೆ ಸಚಿವರಾದ ಉಮೇಶ್ ಕತ್ತಿ ನಿಧನರಾಗಿದ್ದಾರೆ.

ಮಂಗಳವಾರ ರಾತ್ರಿ ಅವರ ನಿವಾಸದಲ್ಲಿ ಹೃದಯಾಘಾತವಾಗಿದ್ದು ತಕ್ಷಣ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಂಗಳೂರಿನ ನಿವಾಸದಲ್ಲಿದ್ದಾಗ ಬಾತ್ ರೂಂಗೆ ಹೋಗಿದ್ದ ವೇಳೆ ಅಲ್ಲಿಯೇ ಕುಸಿದು ಬಿದ್ದಿದ್ದು ಹತ್ತು ನಿಮಿಷವಾದರೂ ಹೊರಗೆ ಬಾರದೇ ಇದ್ದುದರಿಂದ ಆತಂಕಗೊಂಡು ಕುಟುಂಬಿಕರು ಬಾಗಿಲು ಬಡಿದು ನೋಡಿದಾಗ ಪ್ರಜ್ಞೆ ಹೀನ ಸ್ಥಿತಿಯಲ್ಲಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ನಾಲ್ಕೈದು ಬಾರಿ ಹೃದಯ ತಪಾಸಣೆ ನಡೆಸಿದ್ದರು ಎಂದು ರಾಮಯ್ಯ ಆಸ್ಪತ್ರೆ ಮೂಲಗಳು ತಿಳಿಸಿವೆ.

 

Comments are closed.