ಕರಾವಳಿ

ಕೋಟೇಶ್ವರದ ನಾಲ್ಕು ಅಂಗನವಾಡಿ ಕೇಂದ್ರದ ಪೋಷಣಾ ಅಭಿಯಾನ; ಪೌಷ್ಟಿಕ ಆಹಾರ ಶಿಬಿರ ಮತ್ತು ಪ್ರಾತ್ಯಕ್ಷಿಕೆ

Pinterest LinkedIn Tumblr

ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ಮತ್ತು ಗ್ರಾಮ ಪಂಚಾಯತ್ ಕೋಟೇಶ್ವರದ ಸಹಯೋಗದೊಂದಿಗೆ ಕೋಟೇಶ್ವರ ಗ್ರಾಮದ 4 ಅಂಗನವಾಡಿ ಕೇಂದ್ರದ ಪೋಷಣಾ ಅಭಿಯಾನ ಪೌಷ್ಟಿಕ ಆಹಾರ ಶಿಬಿರ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಅಂಕದಕಟ್ಟೆಯ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಸ್ಥಳೀಯ 10 ಗರ್ಭಿಣಿ ಮಹಿಳೆಯರಿಗೆ ಬಾಗೀನ ಅರ್ಪಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಥಳೀಯ ಮಹಿಳೆಯರು ತಯಾರಿಸಿ ತಂದ ಪೌಷ್ಠಿಕ ಆಹಾರವನ್ನು ಬಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೇಶ್ವರ ಗ್ರಾ.ಪಂ ಉಪಾಧ್ಯಕ್ಷೆ ರಾಗಿಣಿ ದೇವಾಡಿಗ ವಹಿಸಿದ್ದರು. ಇಲಾಖಾ ಅಧಿಕಾರಿ ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ತಾಲೂಕು ಅಧಿಕಾರಿ ಭಾಗ್ಯಲಕ್ಷ್ಮಿ ಕಾರ್ಯಕ್ರಮದ ಉದ್ದೇಶ ಮತ್ತು ಪ್ರಯೋಜನೆಯ ಬಗ್ಗೆ ತಿಳಿಸಿದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್, ಸದಸ್ಯರಾದ ಸುರೇಶ್ ದೇವಾಡಿಗ, ರೊಯ್ಸನ್ ಡಿಮೆಲ್ಲೋ, ಲೋಲಾಕ್ಷಿ ಎನ್ ಕೊತ್ವಾಲ್, ಆಶಾ ಜಿ ಕುಂದರ್, ಲತಾ ಶೇಖರ ಮೊಗವೀರ, ಸುಶೀಲ, ಅಂಕದಕಟ್ಟೆ ಶಾಲೆಯ ಮುಖ್ಯಶಿಕ್ಷಕಿ ಲತಾ ರಾಣಿ, ಆಶಾ ಕಾರ್ಯಕರ್ತೆಯರು ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಂಗನವಾಡಿ ಶಾಲಾ ಶಿಕ್ಷಕಿ ಶ್ಯಾಮಲ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Comments are closed.