ಕುಂದಾಪುರ: ಶಂಕರನಾರಾಯಣದ ತನ್ನ ಮನೆಯಿಂದ ಕೋಟ ಕಾಲೇಜಿಗೆಂದು ತೆರಳಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀದೇವಿ (17) ನಾಪತ್ತೆಯಾದ ವಿದ್ಯಾರ್ಥಿನಿ. ಈಕೆ ಕೋಟದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕಾಜಾಡಿ ಎಂಬಲ್ಲಿನಿಂದ ಶ್ರೀದೇವಿ ಸೋಮವಾರ ತಂದೆಯ ಬೈಕಿನಲ್ಲಿ ಶಂಕರನಾರಾಯಣ ಬಸ್ಸು ನಿಲ್ದಾಣದ ತಲುಪಿ ಅಲ್ಲಿಂದ ಕಾಲೇಜಿಗೆ ಹೋಗಲು ಬಸ್ಸನ್ನು ಹತ್ತಿದ್ದು ಕಾಲೇಜಿಗೆ ಹೋಗದೇ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವ ಬಗ್ಗೆ ಆಕೆ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Comments are closed.