ಕರಾವಳಿ

ದುರ್ಗಾದೌಡ್ ಕಾರ್ಯಕ್ರಮದ ಹಿನ್ನೆಲೆ ಅಳವಡಿಸಿದ್ದ ಬ್ಯಾನರ್ ಹಾನಿಗೊಳಿಸಿದ ಕಿಡಿಗೇಡಿಗಳು..!

Pinterest LinkedIn Tumblr

ಕುಂದಾಪುರ: ದುರ್ಗಾ ದೌಡ್ ಕಾರ್ಯಕ್ರಮದ ಹಿನ್ನೆಲೆ ಅಳವಡಿಸಿದ್ದ ಬ್ಯಾನರ್ ದುಷ್ಕರ್ಮಿಗಳು ಹಾನಿಗೊಳಿಸಿದ ಘಟನೆ ಗಂಗೊಳ್ಳಿಯಲ್ಲಿ ರಾತ್ರಿ ನಡೆದಿದೆ.

ಗಂಗೊಳ್ಳಿ ಚೆಕ್ ಪೋಸ್ಟ್ ಸಮೀಪ ದಾಕುಹಿತ್ಲು ತೆರಳುವ ಮಾರ್ಗದ ಜಂಕ್ಷನ್ ಸಮೀಪದಲ್ಲಿ ವಾರಗಳ ಹಿಂದೆ ಈ ಬ್ಯಾನರ್ ಅಳವಡಿಸಲಾಗಿತ್ತು. ಬ್ಯಾನರ್ ಅಳವಡಿಕೆಯ ಕುರಿತು ಸ್ಥಳೀಯ ಗಂಗೊಳ್ಳಿ ಗ್ರಾಮಪಂಚಾಯತ್ ನಿಂದ ಅನುಮತಿ ಕೂಡ ಪಡೆಯಲಾಗಿತ್ತು.

ರಾತ್ರಿ ಕಿಡಿಗೇಡಿಗಳು ಬ್ಯಾನರ್ ಹರಿಯುವ ಮೂಲಕ ಹಾನಿಗೊಳಿಸಿದ್ದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದ್ದು ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದೆ.

Comments are closed.