ಕರ್ನಾಟಕ

ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನಿಯ: ಬಿ. ವೈ ರಾಘವೇಂದ್ರ

Pinterest LinkedIn Tumblr

ಶಿವಮೊಗ್ಗ: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 11,133 ನೇರ ಪಾವತಿ ಪೌರಕಾರ್ಮಿಕರನ್ನು ಖಾಯಂ ಸರ್ಕಾರಿ ನೌಕರರಾಗಿ ಪರಿಗಣಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ. ಇದರಿಂದ ಶಿಕಾರಿಪುರ ಪುರಸಭೆಯಲ್ಲಿ ಒಟ್ಟು 23 ಜನ ನೇರಪಾವತಿ, ಪೌರಕಾರ್ಮಿಕರು ಖಾಯಂ ನೌಕರ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಶಿಕಾರಿಪುರ ಪುರಸಭೆ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ 2022 ಕಾರ್ಯಕ್ರಮವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಖಾಯಂ ಪೌರಕಾರ್ಮಿಕರುಗಳಿಗೆ ನೀಡುತ್ತಿದ್ದ ರೂ. 3,500 ದಿಂದ ರೂ 7,000/- ಗಳಿಗೆ ಹೆಚ್ಚಿಸಲಾಗಿದ್ದು ಕರ್ನಾಟಕ ಸರ್ಕಾರದ ಈ ಕಾರ್ಯ ಅಭಿನಂದನೀಯ. ಊರನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ಆರೋಗ್ಯವನ್ನು ಕಾಪಾಡಿಕೊಳ್ಳಿ, ದೇಶ ಸ್ವಚ್ಛವಾಗಿರಲು ತಮ್ಮ ಕೆಲಸವನ್ನು ದೇಶದ ಕೆಲಸವೆಂದು ಪರಿಗಣಿಸಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಬೇಕು. ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನಿಯ ಎಂದರು.

ಪುರಸಭೆ ಅಧ್ಯಕ್ಷ ರೇಖಾಭಾಯಿ ಮಂಜುನಾಥ್ ಸಿಂಗ್, ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಸದಸ್ಯ ಹಾಲಪ್ಪ, ಪುರಸಭೆಯ ಸರ್ವ ಸದಸ್ಯರುಗಳು , ಮಾಜಿ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿ ಭರತ್ ಮತ್ತಿತರರು ಉಪಸ್ಥಿತರಿದ್ದರು.

Comments are closed.