ಕರಾವಳಿ

ಕುಂದಾಪುರದ ಮುರ್ಡೇಶ್ವರ ಹೌಸ್‌ನಲ್ಲಿ ಭರದಿಂದ ಸಾಗುತ್ತಿದೆ ‘ಸಂಸ್ಕಾರ ಭಾರತ’ ಕನ್ನಡ ಚಲನಚಿತ್ರದ ಚಿತ್ರೀಕರಣ

Pinterest LinkedIn Tumblr

(ವರದಿ- ಯೋಗೀಶ್ ಕುಂದಾಪುರ)

ಕುಂದಾಪುರ: ನಾಗೇಶ್ ಎನ್. ಅವರ ನಿರ್ದೇಶನದ ನಾಗರಾಜ್ ವಿ. ನಿರ್ಮಾಣದ ಸಂಸ್ಕಾರ ಭಾರತ ಎನ್ನುವ ಕಮ್ಮಡ ಚಲನಚಿತ್ರದ ಚಿತ್ರೀಕರಣವು ಕುಂದಾಪುರ ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರ ಮುರ್ಡೇಶ್ವರ ಹೌಸ್‌ನಲ್ಲಿ ಸೋಮವಾರದಿಂದ ನಡೆಯುತ್ತಿದೆ. ಕುಂದಾಪುರ, ಮರವಂತೆ, ತ್ರಾಸಿ, ಬೈಂದೂರು, ಉಡುಪಿ ಸಹಿತ ಹತ್ತು ದಿನಗಳ ಕಾಲ ಕರಾವಳಿ ಭಾಗದಲ್ಲಿ ಶೂಟಿಂಗ್ ನಡೆಯಲಿದೆ.

ಸಂಸ್ಕಾರಭಾರತ ಚಿತ್ರವು ನಾಗೇಶ್ ವಿ. ಅವರ ‘ಅನಾಮಿಕ ಮತ್ತು ಇತರೆ ಕಥೆಗಳು’ ಎನ್ನುವ ಕಥಾ ಸಂಕಲನದಿಂದ ಆಯ್ದ ‘ಅನಾಮಿಕ’ ಎನ್ನುವ ಕಥೆ ಆಧಾರಿತವಾಗಿದೆದ್ದು ಚಿತ್ರದ ನಾಯಕ ಅಶೋಕ್ ನರೇಂದ್ರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು ಭಾರತೀಯ ಸಂಪ್ರದಾಯ, ವೈಚಾರಿಕತೆ ಹಾಗೂ ಅದರ ಹಿಂದಿರುವ ವೈಜ್ಞಾನಿಕತೆಯ ಕುರಿತಾಗಿ ಸಂಶೋಧನೆ ನಡೆಸಲು ಅನಾಮಿಕ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದ ಪಂಡಿತರೊಬ್ಬರನ್ನು ಅರಸಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಹುಡುಕಾಡುವಾಗ ಅವನಿಗೆ ಕಾಡುವ ಅನೇಕ ಜೀವಂತ ಸಮಸ್ಯೆಗಳು ಸನ್ನಿವೇಶಗಳ ರೂಪದಲ್ಲಿ ಎದುರಾಗುತ್ತವೆ. ಆ ಸನ್ನಿವೇಶಗಳನ್ನು ನಾಯಕ ಹೇಗೆ ಎದುರಿಸುತ್ತಾನೆ ಹಾಗೂ ಅನಾಮಿಕನನ್ನು ಹೇಗೆ ಕಂಡುಹಿಡಿಯುತ್ತಾನೆ ಆ ಮೂಲಕ ಸಂಶೋಧನೆ ನಡೆಸಿ ನಮ್ಮ ಸಂಸ್ಕೃತಿಯನ್ನು ಹೇಗೆ ಎತ್ತಿ ಹಿಡಿಯುತ್ತಾನೆ ಎಂಬುದು ಚಿತ್ರದ ಸಂಪೂರ್ಣ ಸಾರಾಂಶವಾಗಿದೆ.

ಚಿತ್ರದ ನಾಯಕರಾಗಿ ಅಶೋಕ್, ನಾಯಕಿ ಕೃತ್ತಿಕಾ ನಟಿಸುತ್ತಿದ್ದು ಎಂ.ಕೆ ಮಠ, ಎಂ.ಡಿ ಕೌಶಿಕ್, ಗಿರೀಶ್ ಬೈಂದೂರು, ನಾಗರಾಜ್ ವಿ., ಪೂರ್ಣಿಮಾ, ರಾಧಿಕಾ, ಅನಿಲ್, ಹಮ್ಝಾ, ಬೇಬಿ ಫಾತಿಮಾ, ಮಾಸ್ಟರ್ ಫಹದ್ ಬಣ್ಣ ಹಚ್ಚುತ್ತಿದ್ದು ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಕೂಡ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ.

ನಾಗೇಶ್ ಎನ್. ಅವರು ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ- ಸಂಭಾಷಣೆ ಜವಬ್ದಾರಿ ನಿರ್ವಹಿಸುತ್ತಿದ್ದು ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣವಿದೆ. ನಾಗೇಶ್ ನಾರಾಯಣ್ ಸಂಕಲನ, ರಾಜಭಾಸ್ಕರ್ ಸಂಗೀತ. ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ. ದೊಡ್ಡರಂಗೇಗೌಡ ಗೀತ ಸಾಹಿತ್ಯ ಬರೆದಿದ್ದಾರೆ. ಪ್ರಸನ್ನ, ನಾಗರಾಜ್ ದಿಗ್ಗಿ ಸಹನಿರ್ದೇಶನದಲ್ಲಿ, ಆರ್. ಚಂದ್ರಶೇಖರ ಪತ್ರಿಕಾ ಸಂಪರ್ಕದ ಜವಬ್ದಾರಿ ಹೊತ್ತಿದ್ದಾರೆ. ಶಿವು ಪ್ರಸಾದನದಲ್ಲಿ ಚಂದ್ರು ಬಿ. ಮನ್ನಾಪುರ್ ಕಲಾನಿರ್ದೇಶನ, ದೇವ್ ಪ್ರಚಾರ ಕಲೆ ಹಾಗೂ ಅಭಿ ಯುನಿಟ್ ಬೆಳಕು ಸಂಯೋಜನೆ ಮಾಡಿದೆ. ಇಡೀ ಚಿತ್ರಕ್ಕೆ ನಾಗರಾಜ್ ವಿ. ಬಂಡವಾಳ ಹೂಡಲಿದ್ದಾರೆ.

 

 

Comments are closed.