ಕರಾವಳಿ

ಉಳ್ಳಾಲದಲ್ಲಿ ಕಾರು ಹಿಟ್-ಆಂಡ್ ರನ್: ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗಂಭೀರ

Pinterest LinkedIn Tumblr

ಉಳ್ಳಾಲ: ಟ್ರಾಫಿಕ್ ಕರ್ತವ್ಯದಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಗೆ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು, ಡಿವೈಡರ್ ಮೇಲೆ ಬಿದ್ದ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಳ್ಳಾಲ ಬೈಲಿನಲ್ಲಿ ಘಟನೆ ನಡೆದಿದ್ದು ಗಾಯಗೊಂಡ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಲೋಕೇಶ್ ನಾಯ್ಕ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲೋಕೇಶ್ ನಾಯ್ಕ್ ಮತ್ತು ಎಎಸ್ಐ ಮಂಜುಳಾ ಅವರು ಹೈವೇ ಪೆಟ್ರೋಲ್ ವಾಹನದಲ್ಲಿ ಭಾನುವಾರ ಸಂಜೆ ಉಳ್ಳಾಲಬೈಲಲ್ಲಿ ಗಸ್ತಿನಲ್ಲಿದ್ದ ವೇಳೆ ಘಟನೆ ನಡೆದಿದೆ.

ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಧಾವಿಸುತ್ತಿದ್ದ ಸ್ವಿಫ್ಟ್ ಕಾರನ್ನ ಲೋಕೇಶ್ ಅವರು ತಪಾಸಣೆಗಾಗಿ ತಡೆದು ಬದಿಗೆ ನಿಲ್ಲುವಂತೆ ಸೂಚಿಸಿದ್ದರು. ಬದಿಗೆ ಬಂದಿದ್ದ ಕಾರು ಏಕಾಏಕಿ ಎದುರಲ್ಲಿದ್ದ ಲೋಕೇಶ್ ಗೆ ಬಲವಾಗಿ ಡಿಕ್ಕಿ ಹೊಡೆದು ಉಳ್ಳಾಲದ ಕಡೆಗೆ ಪರಾರಿಯಾಗಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಲೋಕೇಶ್ ಅವರು ರಸ್ತೆಯ ಡಿವೈಡರ್ ಮೇಲೆ ಎಸೆಯಲ್ಪಟ್ಟಿದ್ದಾರೆ. ತಲೆಯ ಭಾಗಕ್ಕೆ ಡಿವೈಡರ್ ಬಡಿದು ಲೋಕೇಶ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದು ಪರಾರಿಯಾದ ಸ್ವಿಫ್ಟ್ ಕಾರಿನ ಸುಳಿವು ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿಯಿದೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಸಮೀಪದ ಸಿಸಿಟಿವಿಗಳನ್ನು ತಪಾಸಣೆ ನಡೆಸಿದ್ದಾರೆ.

 

Comments are closed.