ಕರ್ನಾಟಕ

ಟಿಪ್ಪು ಎಕ್ಸ್‌ಪ್ರೆಸ್ ಇನ್ಮುಂದೆ ಒಡೆಯರ್ ಎಕ್ಸ್‌ಪ್ರೆಸ್ ರೈಲು..!

Pinterest LinkedIn Tumblr

ಬೆಂಗಳೂರು: ಮೈಸೂರು-ಬೆಂಗಳೂರು ನಡುವೆ ನಿತ್ಯ ಸಂಚರಿಸುವ ಟಿಪ್ಪು ಎಕ್ಸ್ ಪ್ರೆಸ್ ಮತ್ತು ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಾಯಿಸಿ ರೈಲ್ವೆ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

(ಸಾಂದರ್ಭಿಕ ಚಿತ್ರ)

ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ‘ಒಡೆಯರ್ ಎಕ್ಸ್ ಪ್ರೆಸ್’ ಎಂದು, ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ‘ಕುವೆಂಪು ಎಕ್ಸ್ ಪ್ರೆಸ್’ ಎಂದು ಮರು ನಾಮಕರಣ ಮಾಡಿರುವುದಾಗಿ ರೈಲ್ವೆ ಮಂಡಳಿ ಉಪ ನಿರ್ದೇಶಕ ರಾಜೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಅವರು, ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು “ಒಡೆಯರ್ ಎಕ್ಸ್ ಪ್ರೆಸ್ “ ನಿಮಗೆ ಸೇವೆ ನೀಡಲಿದೆ!! ಮೈಸೂರು-ತಾಳಗುಪ್ಪ ರೈಲು “ಕುವೆಂಪು ಎಕ್ಸ್ ಪ್ರೆಸ್” ಆಗಲಿದೆ. ಥಾಂಕ್ಯೂ ಅಶ್ವಿನಿ ವೈಷ್ಣವ್ @AshwiniVaishnaw
ji ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ @JoshiPralhad ಸರ್!. ಎಂದು ತಿಳಿಸಿದ್ದಾರೆ.

Comments are closed.