ಕರಾವಳಿ

ಮಲ್ಪೆಯಲ್ಲಿ ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

Pinterest LinkedIn Tumblr

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯ ಬಳಿ ಬೋಟಿನಿಂದ ಮೀನುಗಾರ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಅ.7ರಂದು ಸಂಭವಿಸಿದೆ.

ಹೆಜಮಾಡಿಯ ಮೀನುಗಾರ ರಮೇಶ್‌ ಕೋಟ್ಯಾನ್‌ (75) ಅವರು ಮೃತರು. ಅವರು ಗುರು ರಾಘವೇಂದ್ರ ಬೋಟಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಮುಂಜಾನೆ 4 ಗಂಟೆಗೆ ಹೆಜಮಾಡಿಯ ಮನೆಯಿಂದ ಮಲ್ಪೆಗೆ ಹೊರಟಿದ್ದು, ಸುಮಾರು 5.30ರ ವೇಳೆಗೆ ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಬೆಳಗ್ಗೆ 7. 30ಕ್ಕೆ ಅವರ ಮೃತದೇಹ ಬಂದರಿನ ದಕ್ಕೆಯ ನೀರಿನಲ್ಲಿ ಪತ್ತೆಯಾಗಿದ್ದು ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರು ಮೇಲೆತ್ತಿದ್ದಾರೆ.

ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.