ಕುಂದಾಪುರ: ಕೆ.ಎಸ್.ಆರ್.ಟಿ.ಸಿ ನಗರ ಸಾರಿಗೆ ಬಸ್ ಡೋರ್ ಮೇಲೆ ನೇತಾಡಿಕೊಂಡು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಅಪಾಯಕರ ಸ್ಥಿತಿಯಲ್ಲಿ ಸಂಚರಿಸುವ ದೃಶ್ಯ ಕಂಡುಬಂದಿದೆ.
ಶನಿವಾರ 1.15 ಸುಮಾರಿಗೆ ಕುಂದಾಪುರ ಸರ್ವೀಸ್ ರಸ್ತೆಯಿಂದ ಬಸ್ರೂರು ಮೂರುಕೈ ಮಾರ್ಗವಾಗಿ ಸಿದ್ದಾಪುರಕ್ಕೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮಿತಿ ಮೀರಿದ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದು ಜನರ ಜೀವದೊಂದಿಗೆ ಚೆಲ್ಲಾಟವಾಡುವಂತಾಗಿತ್ತು.
ಇನ್ನು ಶಾಲಾ- ಕಾಲೇಜಿಗೆ ಬಂದು ಹೋಗುವ ಅವಧಿಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ಸಿನಲ್ಲಿ ನಿತ್ಯವೂ ಕೂಡ ಇದೇ ವರ್ತನೆ ಕಂಡುಬರುತ್ತಿದ್ದರೂ ಕೂಡ ಸಂಚಾರಿ ಠಾಣೆ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಷಕ್ಕೆ ಕಾರಣವಾಗಿದೆ.
Comments are closed.