ಕರಾವಳಿ

ಹೆಮ್ಮಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ತನ್ನ ಸಂಗಡಿಗರ ಜೊತೆ ಭಾಜಪಾ ಸೇರ್ಪಡೆ..!

Pinterest LinkedIn Tumblr

ಕುಂದಾಪುರ: ಹೆಮ್ಮಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸತ್ಯನಾರಾಯಣ ರಾವ್( ನಾಣಿ) ಹಾಗೂ ಪ್ರವೀಣ್ (ಪಮ್ಮಿ) ತಮ್ಮ ಸಂಗಡಿಗರೊಂದಿಗೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಉಪಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜೆಡ್ಡು, ಕಟ್ ಬೇಲ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಪುತ್ರನ್, ಹೆಮ್ಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಪೂಜಾರಿ, ರಿಚರ್ಡ್ ನಾಯಕ್, ಪ್ರಶಾಂತ್ ಪೂಜಾರಿ , ಉದಯ್ ದೇವಾಡಿಗ, ಕೃಷ್ಣ ಕೋಟ್ಯಾನ್ , ಸದಾಶಿವ ಶೆಟ್ಟಿ ಕಟ್ ಬೇಲ್ತೂರು ಮತ್ತಿತರರು ಉಪಸ್ಥಿತರಿದ್ದರು.

Comments are closed.