ಕರ್ನಾಟಕ

‘ಗಂಧದಗುಡಿ’ ಬಗ್ಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ರಿಂದ ಮಹತ್ವದ ನಿರ್ಧಾರ..!

Pinterest LinkedIn Tumblr

ಬೆಂಗಳೂರು: ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್‌ ಅವರ ಕೊನೆ ಸಿನಿಮಾ ಗಂಧದಗುಡಿ ವಿಚಾರದಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

ಮುಂದಿನ ಮೂರು ದಿನಗಳ ಕಾಲ ಕರ್ನಾಟಕದ ಎಲ್ಲಾ ಥಿಯೇಟರ್​ಗಳಲ್ಲೂ ಗಂಧದಗುಡಿ ಚಿತ್ರವನ್ನ ಕಮ್ಮಿ ಟೆಕೆಟ್ ಬೆಲೆಯಲ್ಲಿ ತೋರಿಸಲು ನಿರ್ಧರಿಸಿದ್ದಾರೆ. .

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅಶ್ವಿನಿ, ‘ಗಂಧದಗುಡಿ’ ಅಪ್ಪು ಕನಸಿನ ಕರ್ನಾಟಕ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನ ಕನ್ನಡಿಗರಿಗೆ ಪರಿಚಯಿಸುವ ಹಂಬಲ. ಈ ಸಿನಿಮಾ ರೂಪಗೊಳ್ಳಲು ಪ್ರಮುಖ ಕಾರಣ ಅಪ್ಪು. ಎಲ್ಲಾ ಕನ್ನಡಿಗರು ಅದರಲ್ಲೂ ಮಕ್ಕಳು ನೋಡಬೇಕೆಂಬುದು ನನ್ನ ಆಸೆ. ಅದೇ ಕಾರಣಕ್ಕೆ ನಾನು ಈ ಚಿತ್ರತಂಡದ ಜೊತೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ ಗಂಧದಗುಡಿಯನ್ನ 07-11-2022 ಸೋಮವಾರದಿಂದ 10-11-2022 ಅಂದರೆ ಮುಂದಿನ ಗುರುವಾರದವರೆಗೆ ಸಿಂಗಲ್ ಸ್ಕ್ರೀನ್ಸ್ ಥಿಯೇಟರ್​​ಗಳಲ್ಲಿ 56 ರೂಪಾಯಿಗೆ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ 112 ರೂಪಾಯಿಗೆ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳನ್ನ ಪ್ರದರ್ಶಿಸಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಗಂಧದಗುಡಿ ಸಿನಿಮಾ ಪುನೀತ್ ರಾಜ್‌ಕುಮಾರ್‌ರ ಕನಸಾಗಿತ್ತು. ಜೊತೆಗೆ ಗಂಧದಗುಡಿ ಸಿನಿಮಾವನ್ನ ಮನೆ ಮಂದಿಯೆಲ್ಲಾ ಥಿಯೇಟರ್‌ಗೆ ಹೋಗಿ ನೋಡುತ್ತಿದ್ದಾರೆ. ಅಮೋಘ ವರ್ಷ ನಿರ್ದೇಶನದಲ್ಲಿ ಈ ಸಾಕ್ಷ್ಯಚಿತ್ರ ಸಿನಿಮಾ ಮೂಡಿಬಂದಿದೆ. ಇನ್ನು ಗಂಧದಗುಡಿ ಸಿನಿಮಾದಲ್ಲಿ ಉತ್ತರ ಕನ್ನಡದ ದಟ್ಟ ಅಡವಿಯನ್ನು ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಕಾಳಿ ಕಣಿವೆಯಲ್ಲಿ ಅಪ್ಪು ಓಡಾಡುವ, ಉತ್ತರ ಕನ್ನಡದ ಜೀವ ವೈವಿಧ್ಯ ದೃಶ್ಯಗಳು ಅಭಿಮಾನಿಗಳ ಮನಸೂರೆಗೊಳ್ಳುತ್ತಿವೆ. 96 ನಿಮಿಷಗಳ ಗಂಧದಗುಡಿ ಅರಣ್ಯ ಸಂಪತ್ತು, ನೀರು, ಪ್ಲಾಸ್ಟಿಕ್ ಬಳಕೆಯ ಅನಾಹುತ ಎಲ್ಲವನ್ನು ಸಾರುವ ಅದ್ಬುತ ಸಂದೇಶ ಸಾರುವ ಸಿನಿಮಾ ಆಗಿದೆ. ಅಪ್ಪು ತಮ್ಮ ಕೊನೆಯ ಚಿತ್ರದಲ್ಲಿ ಕನ್ನಡ ನಾಡು, ನುಡಿಯ ಮಹತ್ವ ಸಾರಿದ್ದಾರೆ.

Comments are closed.