ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಆರೂರು ಗ್ರಾಮದ ವಿವಿಧ ಕಡೆ ಪಂಚಾಯತ್ ವತಿಯಿಂದ ಅಳವಡಿಸಿದ್ದ ಸೋಲಾರ್ ದಾರಿ ದೀಪಕ್ಕೆ ಅಳವಡಿಸಿದ ಬ್ಯಾಟರಿ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಿಗಳ ಕಳವಿನ ಬಗ್ಗೆ ಆರೂರು ಪಂಚಾಯತ್ ಉಪಾಧ್ಯಕ್ಷ ಗುರುರಾಜ್ ಭಟ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು ಆರೋಪಿ ಹಾಗೂ ಸೊತ್ತು ಪತ್ತೆಯ ಬಗ್ಗೆ ಸಿಬ್ಬಂದಿಗಳನ್ನು ನೇಮಿಸಿದ್ದರು.
ಉಪ್ಪೂರು ಅಮ್ಮುಂಜೆ ನಿವಾಸಿ ಯಜ್ಞೇಶ್ (24), ಉದ್ಯಾವರ ಮೂಲದ ಪೂರ್ಣೇಶ್ ಆಚಾರ್ಯ (22) ಬಂಧಿತ ಆರೋಪಿಗಳಾಗಿದ್ದು ಬೈಕ್‌ನಲ್ಲಿ ಕಳವು ಮಾಡಿದ ಬ್ಯಾಟರಿ ಸಮೇತ ಮಾರಾಟ ಮಾಡಲು ಹೋಗುತ್ತಿರುವಾಗ ಅವರನ್ನು ತಡೆದು ನಿಲ್ಲಿಸಿದ್ದು ವಿಚಾರಣೆ ವೇಳೆ ಬ್ಯಾಟರಿ ಕಳವು ಬಗ್ಗೆ ಒಪ್ಪಿಕೊಂಡಿದ್ದಾರೆ. ಬೈಕ್ ಹಾಗೂ ಬ್ಯಾಟರಿ ಸಮೇತ ಆರೋಪಿಗಳನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದು ಮಾತ್ರವಲ್ಲದೆ ಅವರು ಬೇರೆ ಕಡೆ ಮಾರಾಟ ಮಾಡಲು ಇರಿಸಿದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷರಾದ ಅಕ್ಷಯ್ ಮಚೀಂದ್ರ ಹಾಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಸುಧಾಕರ ಎಸ್. ನಾಯ್ಕ್ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣಾ ಪಿ.ಎಸ್.ಐ ರಾಜಶೇಖರ ವಂದಲಿ, ಠಾಣಾ ತನಿಖೆ ಪಿ.ಎಸ್.ಐ ಮುಕ್ತಾಬಾಯಿ, ಬ್ರಹ್ಮಾವರ ಠಾಣಾ ಅಪರಾಧ ಸಿಬ್ಬಂದಿಗಳಾದ ವೆಂಕಟ್ರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ರಾಘವೇಂದ್ರ ಕಾರ್ಕಡ, ಉದಯ ಅಮೀನ್, ಮಹಮ್ಮದ್ ಅಜ್ಮಲ್, ಹಾಗೂ ದಿಲೀಪ, ಪ್ರಸಾದ, ಸಂತೋಶ್ ರಾಥೋಡ್ ಹಾಗೂ ಕಂಪ್ಯೂಟರ್ ಸಿಬ್ಬಂದಿ ಯೋಗೀಶ್ ಮತ್ತು ಜೀಪು ಚಾಲಕ ಅಣ್ಣಪ್ಪ ಪಾಲ್ಗೊಂಡಿದ್ದರು.
Comments are closed.