ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹೊಸನಗರ ತಾಲೂಕಿನ ಕೊಡಚಾದ್ರಿಯ ಸರ್ವಜ್ಞ ಪೀಠದಿಂದ – ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವರೆಗೆ ಕೇಬಲ್ ಕಾರ್ ಅಳವಡಿಸಿವ ಕಾಮಗಾರಿಗೆ ಕೇಂದ್ರದ ಭೂ ಸಾರಿಗೆ ಮಂತ್ರಾಲಯದ National Highways Logistics Management Limited (NHLML) ಅಧಿಕಾರಿಗಳ ತಂಡವು ಡಿಪಿಆರ್ ಮತ್ತು ಪತನ ನಕ್ಷೆಯನ್ನು ಅಂತಿಮಗೊಳಿಸಲು ಹಾಗೂ ಡಿಪಿಆರ್ ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಅಭ್ಯಾಸ ಮಾಡಿ, ಪರಿಶೀಲಿಸುವ ನಿಟ್ಟಿನಲ್ಲಿ ಎರಡು ದಿನದ ಸರ್ವೇ ಕಾರ್ಯ ಮತ್ತು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕೇಬಲ್ ಕಾರ್ ನಿರ್ಮಾಣಕ್ಕೆ ಇರುವ ಸಮಸ್ಯೆಯ ಕುರಿತು ದಿನಾಂಕ 19-11-2022 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ ರಾಘವೇಂದ್ರ ಅವರೊoದಿಗೆ ಚರ್ಚಿಸಿದ್ದು. ಕೇಂದ್ರದ ಪರ್ವತ ಮಾಲಾ ಅಡಿಯಲ್ಲಿ ಬರುವ ನೂತನ ಕೇಬಲ್ ಕಾರ್ ಯೋಜನೆಯು ಶೀಘ್ರ ಅಳವಡಿಸುವ ಕಾರ್ಯ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊಡಚಾದ್ರಿಯಿಂದ ಕೊಲ್ಲೂರಿನವರೆಗೆ ಕೇಬಲ್ ಕಾರ್ ನಿರ್ಮಾಣಕ್ಕೆ ಇರುವ ತೊಡಕುಗಳನ್ನು ಪರಿಹರಿಸಲು ಪ್ರವಾಸೋಧ್ಯಮ ಇಲಾಖೆ, ಅರಣ್ಯ ಇಲಾಖೆ, ರಾಷ್ಟೀಯ ಹೆದ್ದಾರಿ ಅಧಿಕಾರಿಗಳ ಜೊತೆಗೆ ಸೇರಿ ಪರಿಹರಿಸಿ, ಕನಿಷ್ಠ ಒಂದು ತಿಂಗಳ ಅವಧಿಯಲ್ಲಿ ಡಿಪಿಆರ್ ಮಂಜೂರಾತಿ ಪಡೆಯುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ NHLML ದೆಹಲಿಯ ಹಿರಿಯ ಮ್ಯಾನೇಜರ್ ಅನುರಾಗ್ ತ್ರಿಪಾಟಿ, NHLML ಬೆಂಗಳೂರು ಮ್ಯಾನೇಜರ್ ರೀನಾ ಪವಾರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಶಿವಮೊಗ್ಗದ ಪೀರ್ ಪಾಷಾ, ಡಿಪಿಆರ್ ಕನ್ಸಲ್ಟೆಂಟ್ ಶ್ರವಣ ಕುಮಾರ್, ಪ್ರವಾಸೋಧ್ಯಮ ಇಲಾಖೆಯ ಗುರುಪ್ರಸಾದ್, ವೆಂಕಟೇಶ್ ಕಿಣಿ, ಶಿವಕುಮಾರ್ ವನ್ಯಜೀವಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.