ಮಂಗಳೂರು: ಇಲ್ಲಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ ತಿಂಗಳೊಂದರಲ್ಲಿ ಬರೋಬ್ಬರಿ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
(ಸಾಂದರ್ಭಿಕ ಚಿತ್ರ)
ನ.1ರಿಂದ 30ರವರೆಗೆ ವಿವಿಧ ಚಿನ್ನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ 7,692 ಗ್ರಾಂ ತೂಕದ 24 ಕ್ಯಾರೆಟ್ ಪರಿಶುದ್ಧತೆಯ 4,01,18,280 ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಿಂದ ಮಂಗಳೂರಿಗೆ ಆಗಮಿಸಿದ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.
ಎಲ್‌ಇಡಿ ಬಲ್ಬ್, ವಾಚ್, ಮೊಬೈಲ್ ಫೋನ್, ಕೀಪ್ಯಾಡ್, ಟ್ರಾಲಿ ಬ್ಯಾಗ್‌ನ ಬೀಡಿಂಗ್, ಟೀ-ಕಾಫಿ ಮೇಕರ್ ಮೋಟರ್‌ನಲ್ಲಿ ಬೆಳ್ಳಿ ಲೇಪಿತ ಪ್ಲೇಟಿನ ರೂಪದಲ್ಲಿ, ಕರ್ಟನ್ ಬಾಕ್ಸ್‌ನ ಲೇಯರ್ ಒಳಗಡೆ ಪೌಡರ್/ಪೇಸ್ಟ್ ರೂಪದಲ್ಲಿ, ಎರಡು ಲೇಯರ್ ಇರುವ ಬನಿಯನ್‌ನ ಒಳಗೆ, ಸಾಕ್ಸ್ ಮತ್ತು ಒಳ ಉಡುಪಿನಲ್ಲಿ ಮತ್ತು ಗುದದ್ವಾರದಲ್ಲಿ ಇರಿಸಿ ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಈ ಎಲ್ಲ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದೆ.
Comments are closed.