ಕರ್ನಾಟಕ

ಬಿ.ಎಸ್.ವೈ ಕನಸಿನ ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸಿಲಿದ್ದಾರೆ ಮೋದಿ: ಬಿ.ವೈ ರಾಘವೇಂದ್ರ

Pinterest LinkedIn Tumblr

ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪನವರ ಕನಸಿನ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಖುದ್ದು ಮೋದಿಜಿ ಬಂದು ಮಲೆನಾಡಿನ ಈ ಐತಿಹಾಸಿಕ ವಿಮಾನ ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸಿಲಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

ಮೋದಿಜಿ ಬರುವ ಮುನ್ನ 2014 ರಲ್ಲಿ ಭಾರತದಲ್ಲಿ ‌ಒಟ್ಟು 73 ವಿಮಾನ ನಿಲ್ದಾಣಗಳಿದ್ದವು. ಇದೀಗ 8 ವರ್ಷದ ನಂತರ ಭಾರತದಲ್ಲಿ ಬರೋಬ್ಬರಿ 141 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ಮೋದಿ ಸರ್ಕಾರ ಕೇವಲ 8 ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದ್ವಿಗುಣ ಗೊಳಿಸಿದೆ.

ಕರ್ನಾಟಕದಲ್ಲೂ ನೂತನವಾಗಿ 6 ವಿಮಾನ ನಿಲ್ದಾಣಗಳನ್ನು ಮೋದಿ ಸರ್ಕಾರದ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿದೆ. ಶಿವಮೊಗ್ಗ, ಹಾಸನ, ಬಳ್ಳಾರಿ, ರಾಯಚೂರು, ವಿಜಯಪುರದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ ಎಂದಿದ್ದಾರೆ.

Comments are closed.