ಉಡುಪಿ: ಮನೆ ಸಮೀಪದ ಶೆಡ್‌ನ್ನು ಅಕ್ರಮ ಕಸಾಯಿಖಾನೆಯಾಗಿಸಿಕೊಂಡು ಕದ್ದು ತಂದ ಜಾನುವಾರನ್ನು ಹತ್ಯೆಗೈದು ಮಾಂಸ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ನಡೆದಿದೆ.
ಹಿಲಿಯಾಣ ಹೈಕಾಡಿ ನಿವಾಸಿಗಳಾದ ಇಮ್ತಿಯಾಜ್ (45), ಮುಕ್ತಾರ್ ಆಹ್ಮದ್ (41) ಬಂಧಿತರು. ಇದೇ ವೇಳೆ ಶಬ್ಬರ್ ಹಾಗೂ ಮಹಮ್ಮದ್ ಹುಸೇನ್ ಪರಾರಿಯಾಗಿದ್ದಾರೆ.
ಡಿ.22 ರಂದು ಸಂಜೆ ಶಂಕರನಾರಾಯಣ ಠಾಣಾ ಪಿಎಸ್ಐ ಶ್ರೀಧರ್ ನಾಯ್ಕ್ ಅವರಿಗೆ ಸಿಕ್ಕ ಖಚಿತ ಮಾಹಿತಿ ಹಿನ್ನೆಲೆ ಸಿಬ್ಬಂದಿಗಳ ಜೊತೆ ತೆರಳಿ ಹೈಕಾಡಿ ಎಂಬಲ್ಲಿನ ಇಮ್ತಿಯಾಜ್ ಎಂಬಾತನಿಗೆ ಸೇರಿದ ಮನೆಯ ಬಳಿಯ ಶೆಡ್‌ಗೆ ದಾಳಿ ಮಾಡಿದ್ದು, ಅಕ್ರಮವಾಗಿ ಕಸಾಯಿಖಾನೆ ಮಾಡಿ ಹೈಕಾಡಿ ನೀರಿನ ಟ್ಯಾಂಕ್ ಬಳಿ ಮೇಯಲು ಬಿಟ್ಟಿದ ಜಾನುವಾರನ್ನು ಕದ್ದು ತಂದು ಹತ್ಯೆ ಮಾಡಿ ಮಾಂಸ ಮಾಡಿದ್ದು ಪೊಲೀಸರು ದಾಳಿ ವೇಳೆ ಅಂದಾಜು 30 ಕಿಲೋ ಗೋಮಾಂಸ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.