ಬೆಂಗಳೂರು: ಇತಿಹಾಸ ಸೃಷ್ಟಿಸಿದ ಕನ್ನಡದ ಹೆಮ್ಮೆಯ ಸಿನಿಮಾ `ಕಾಂತಾರ’ ಇದೀಗ ಟಿವಿ ಪರದೆಯಲ್ಲಿ (ಕಿರುತೆರೆ) ಮಿಂಚಲು ಡೇಟ್ ಫಿಕ್ಸ್ ಆಗಿದೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ’ ಸಿನಿಮಾಗೆ ದೇಶಾದ್ಯಂತ ವ್ಯಾಪಕಮೆಚ್ಚುಗೆ ವ್ಯಕ್ತವಾಗಿತ್ತು. ನಂತರ ಒಟಿಟಿಯಲ್ಲಿಯೂ ಕಾಂತಾರ ಬಾರೀ ಸದ್ದು ಮಾಡಿತ್ತು.
‘ಕಾಂತಾರ’ ಜನವರಿ 15 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯಲ್ಲಿ ದೈವ ದರ್ಶನವನ್ನು ಕಣ್ತುಂಬಿಕೊಳ್ಳಲು ಜನರು ಕಾತುರರಾಗಿದ್ದಾರೆ. ಸುವರ್ಣ ವಾಹಿನಿಯಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳು ಪ್ರಸಾರವಾಗಿದ್ದು ಇದೀಗ `ಕಾಂತಾರ’ ಎಂಬ ದಂತಕಥೆ ಸೇರ್ಪಡೆಯಾಗುತ್ತಿದ್ದು ಈ ಮೂಲಕ `ಕಾಂತಾರ’ ಕಿರುತೆರೆಗೆ ಲಗ್ಗೆ ಇಡುತ್ತಿದೆ.
Comments are closed.