ಕುಂದಾಪುರ: ಶ್ರೀ ಶನೀಶ್ವರ ಯಕ್ಷಾಭಿಮಾನಿ ಬಳಗ (ರಿ.) ಆಜ್ರಿ ಇವರ ಆಶ್ರಯದಲ್ಲಿ ‘ಶ್ರೀ ಆಜ್ರಿ ಶನೀಶ್ವರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಮತ್ತು ನಂದ್ರೊಳ್ಳಿ ಶಾಂತರಾಮ ಶೆಟ್ಟಿ ಅವರು ರಚಿಸಿದ ಪೌರಾಣಿಕ ಪ್ರಸಂಗ ‘ಮಾಯಾ ಮಹಿಷ ವಧೆ’ ಎಂಬ ನೂತನ ಪ್ರಸಂಗ ಬಿಡುಗಡೆ ಕಾರ್ಯಕ್ರಮವು ಜ.10 ಮಂಗಳವಾರ ರಾತ್ರಿ ಆಜ್ರಿ ಮೈದಾನದಲ್ಲಿ ಜರುಗಲಿದೆ ಎಂದು ಶ್ರೀ ಕ್ಷೇತ್ರ ಚೋನಮನೆ ಆಜ್ರಿಯ ಧರ್ಮದರ್ಶಿ ಹಾಗೂ ಶ್ರೀ ಶನೀಶ್ವರ ಯಕ್ಷಾಭಿಮಾನಿ ಬಳಗದ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಮಹಾಬಲ ದೇವಾಡಿಗ ಕಮಲಶಿಲೆ, ಬ್ರಹ್ಮೇರಿ ಶೀನ ನಾಯ್ಕ್)
ಕಳೆದ ವರ್ಷ ಸಾಂಕೇತಿಕವಾಗಿ ಈ ಕಾರ್ಯಕ್ರಮ ಮಾಡಿದ್ದು ಈ ಬಾರಿ ಆಜ್ರಿ ಶ್ರೀ ಶನೀಶ್ವರ ಯಕ್ಷಾಭಿಮಾನಿ ಬಳಗ ಹುಟ್ಟು ಹಾಕಿದ್ದು ಈ ಸಂಘಟನೆ ಮೂಲಕವಾಗಿ 30 ವರ್ಷಕ್ಕೂ ಅಧಿಕ ಯಕ್ಷಗಾನ ಕ್ಷೇತ್ರದಲ್ಲಿರುವ ವೃತ್ತಿಪರ ಕಲಾವಿದರಿಗೆ ಸನ್ಮಾನಿಸಲು ತೀರ್ಮಾನಿಸಲಾಗಿದೆ. ಮಂದರ್ತಿ ಮೇಳದ ಹಿರಿಯ ಕಲಾವಿದ ಮಹಾಬಲ ದೇವಾಡಿಗ ಕಮಲಶಿಲೆ, ಮಾರಣಕಟ್ಟೆ ಮೇಳದ ಕಲಾವಿದ ಬ್ರಹ್ಮೇರಿ ಶೀನ ನಾಯ್ಕ್ ಅವರಿಗೆ ಈ ಬಾರಿ ಶ್ರೀ ಆಜ್ರಿ ಶನೀಶ್ವರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅಂದು ಶ್ರೀ ಶನೀಶ್ವರ ಕೃಪಾಪೋಶಿತ ಯಕ್ಷಗಾನ ಮಂಡಳಿ ಚೊನಮನೆಯ ಕಲಾವಿದರು ಹಾಗೂ ಅತಿಥಿ ಕಲಾವಿದರಾದ ವಿದ್ವಾದರ ರಾವ್ ಜಲವಳ್ಳಿ, ಶಶಿಕಾಂತ ಶೆಟ್ಟಿ, ಭಾಗವತರಾಗಿ ಬ್ರಹ್ಮೂರು ಶಂಕರ ಭಟ್ ಕೂಡುವಿಕೆಯಲ್ಲಿ ‘ಮಾಯಾಪುರಿ ವೀರಮಣಿಕಾಳಗ’
ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದರು.
ಈ ಸಂದರ್ಭ ಆಜ್ರಿ ಶ್ರೀ ಶನೀಶ್ವರ ಯಕ್ಷಾಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಭಂಡಾರಿ, ಕಾರ್ಯದರ್ಶಿ ಅಮೃತ್ ಶೆಣೈ ಆರ್ಗೋಡು, ಕೋಶಾಧಿಕಾರಿ ಅರುಣ್ ಶೆಟ್ಟಿ ಆಜ್ರಿ, ಸದಸ್ಯರಾದ ಮೂರ್ತಿ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ರಾಜೇಶ ಶೆಣೈ ಇದ್ದರು.
Comments are closed.