ಉಡುಪಿ: ಇಲ್ಲಿನ ಸೀತಾನದಿ ಹೊಳೆಗೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜ.8ರ ಸಂಜೆ ನಡೆದಿದೆ.
ದಾವಣಗೆರೆ ಮೂಲದ ಪವನ್.ಎಸ್.ಎಮ್ (34) ಮೃತಪಟ್ಟ ವ್ಯಕ್ತಿ.
ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಸೀತಾನದಿ ಹೊಳೆಗೆ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಸ್ನಾನ ಮಾಡಲು ಹೋದ ಪವನ್, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಕೂಡಲೇ ದಡಕ್ಕೆ ಕರೆತಂದು ಉಪಚರಿಸಿದ ಬಳಿಕ ಹೆಬ್ರಿ ಸರಕಾರ ಆಸ್ಪತ್ರೆ ಕರೆತಂದಿದ್ದು ಅಷ್ಟರಲ್ಲಾಗಲೇ ಪವನ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.