ಕರಾವಳಿ

ತಂದೆಯ ಸ್ನೇಹಿತನೆಂದು ನಂಬಿಸಿ‌ ಪೇಟಿಯಂ ಮೂಲಕ 2 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿಕೊಂಡು ವಂಚನೆ..!

Pinterest LinkedIn Tumblr

ಉಡುಪಿ: ತಂದೆಯ ಸ್ನೇಹಿತನೆಂದು ಕರೆ ಮಾಡಿ ಯುವಕನೋರ್ವನಿಂದ ಪೇಟಿಯಂ ಮೂಲಕ ಹಣ 2 ಲಕ್ಷಕ್ಕೂ ಅಧಿಕ ಹಣ ಹಂತಹಂತವಾಗಿ ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಬಗ್ಗೆ ದೂರು ದಾಖಲಾಗಿದೆ.

Cyber Attack Crime

ದೂರಿನ ಸಾರಾಂಶ:
ಮಣಿಪಾಲ‌ ಹಾಸ್ಟೆಲ್ ವಾಸಿಯಾದ ಚಿತ್ರಾಂಗ್ ಜುನಿವಾಲ್ ಎನ್ನುವರಿಗೆ 2022ರ ಡಿ.25 ರಂದು ಅಪರಿಚಿತ ವ್ಯಕ್ತಿ ಮೊಬೈಲ್ ಕರೆ ಮಾಡಿ, ‘ತಾನು ನಿಮ್ಮ ಅಂಕಲ್ ನಿನ್ನ ತಂದೆ ನಂಬ್ರ ಕೊಟ್ಟಿರುವುದಾಗಿ ಹೇಳಿ, ನಿಮ್ಮ ಖಾತೆಗೆ ತಪ್ಪಾಗಿ ರೂಪಾಯಿ 25,000 ಹಣ ಡೆಪೋಸಿಟ್ ಆಗಿದೆ ಅದನ್ನು ಕೂಡಲೇ ಪೇಟಿಎಂ ಮೂಲಕ ಹಿಂತಿರುಗಿಸು’ ಎಂದು ತಿಳಿಸಿದ್ದು ಚಿತ್ರಾಂಗ್ ಜುನಿವಾಲ್ ಆತ ತಂದೆಯ ಸ್ನೇಹಿತರೆಂದು ತಿಳಿದು, ಆತನು ಸೂಚಿಸಿದ ನಂಬರಿಗೆ ಪೇಟಿಯಂ ಮೂಲಕ ರೂ. 24,500/- ಹಣ ವರ್ಗಾವಣೆ ಮಾಡಿದ್ದ. ಆದರೆ ಆ ಹಣ ಖಾತೆಗೆ ಜಮೆ ಆಗಿಲ್ಲ ಎಂದು ಅಪರಿಚಿತ ವ್ಯಕ್ತಿ ಚಿತ್ರಾಂಗ್ ಜುನಿವಾಲ್ ರವರಿಗೆ ಪದೇ ಪದೇ ಕರೆ ಮಾಡಿ, ಡಿ.25 ರಿಂದ ಡಿ.27ರ ಮಧ್ಯಾವದಿಯ ಎರಡು ದಿನದಲ್ಲಿ 2 ಲಕ್ಷ 13 ಸಾವಿರದ 999 ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ.

ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.