ಕರಾವಳಿ

ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ-ಓರ್ವ ಬಂಧನ, ಸೊತ್ತುಗಳು ವಶಕ್ಕೆ

Pinterest LinkedIn Tumblr

ಕುಂದಾಪುರ: ಅಕ್ರಮ ಗೋವಧೆ ಸ್ಥಳಕ್ಕೆ ದಾಳಿ ನಡೆಸಿದ ಕುಂದಾಪುರ ಗ್ರಾಮಾಂತರ ಠಾಣೆ ಎಸ್‌ಐ ಪವನ್‌ ನಾಯಕ್‌ ಹಾಗೂ ಸಿಬ್ಬಂದಿಗಳು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗುಲ್ವಾಡಿ ಗ್ರಾಮದ ಕುದ್ರು ಎಂಬಲ್ಲಿ ಅಬ್ದುಲ್‌ ಸಮದ್‌ ಮನೆಯ ಪಕ್ಕದಲ್ಲಿ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿದೆ ಎಂದು ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.

ಗೋವುಗಳನ್ನು ಅಕ್ರಮವಾಗಿ ವಧೆ ಮಾಡಿ ಮಾಂಸ ತಯಾರಿಸುತ್ತಿರುವ ಮಾಹಿತಿಯಂತೆ ದಾಳಿ ಮಾಡಿದಾಗ 3 ಜನರು ಓಡಿ ಹೋಗಿದ್ದು, ಆರೋಪಿ ಮೊಹಮ್ಮದ್‌ ಯೂಸುಬ್‌ನನ್ನು ಬಂಧಿಸಲಾಗಿದೆ.

ಗೋ ಮಾಂಸ, ಗೋವಿನ 2 ತಲೆ, ಗೋವಿನ ಕಾಲುಗಳು ಮತ್ತಿತ್ತರ ತ್ಯಾಜ್ಯಗಳು ಶೆಡ್‌ನ‌ಲ್ಲಿ ಹರಡಿಕೊಂಡಿತ್ತು. ಒಂದು ಜೀವಂತ ಗೋವನ್ನು ಕಟ್ಟಿ ಹಾಕಲಾಗಿತ್ತು. ಅದನ್ನು ಪೊಲೀಸರು ರಕ್ಷಿಸಿದ್ದಾರೆ. ಮೊಹಮ್ಮದ್‌ ಯೂಸುಬ್‌, ಮೊಯ್ದಿನ್‌ ಹಾಗೂ ನಾಸೀರ್‌ಆಲಿ ಸೇರಿ ಗುಲ್ವಾಡಿ ಬೊಳುಕಟ್ಟೆ ಎಂಬಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ 3 ಗೋವುಗಳನ್ನು ಕಳವು ಮಾಡಿ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Comments are closed.