ಕರಾವಳಿ

ಉಡುಪಿಯಲ್ಲಿ ಗಾಂಜಾ, ನಿಷೇಧಿತ ಡ್ರಗ್ಸ್ ಮಾರಾಟ‌ ಯತ್ನ; ಇಬ್ಬರನ್ನು ಬಂಧಿಸಿದ ಸೆನ್ ಠಾಣೆ ಪೊಲೀಸರು

Pinterest LinkedIn Tumblr

ಉಡುಪಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಸೆನ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿಗಳ ತಂಡದವರು ಬಂಧಿಸಿದ್ದಾರೆ.

ಹಿರಿಯಡ್ಕ ಮೂಲದ ರಾಘವೇಂದ್ರ ದೇವಾಡಿಗ (42) ಮತ್ತು ಉಡುಪಿ ಅಲೆವೂರು ಬಡಗುಬೆಟ್ಟು ಜಗದೀಶ್ ಪೂಜಾರಿ (32) ಬಂಧಿತ ಆರೋಪಿಗಳು. ಇವರು ಉಡುಪಿಯ ಮೂಡನಿಡಂಬೂರು ಗ್ರಾಮದ ಟೌನ್ ಹಾಲ್ ಬಳಿಯ ರಿಕ್ಷಾ ನಿಲ್ದಾಣದ ಬಳಿ ಗಾಂಜಾ ಮತ್ತು‌ ನಿಷೇಧಿತ ಮಾದಕ ವಸ್ತುವನ್ನು (ಡ್ರಗ್ಸ್) ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಧಿತರಿಂದ 28 ಸಾವಿರ ಮೌಲ್ಯದ 1.176 ಕೆ.ಜಿ ಗಾಂಜಾ, 45 ಸಾವಿರ ಮೌಲ್ಯದ 10 ಗ್ರಾಂ ಡ್ರಗ್ಸ್, 80 ಸಾವಿರ ಮೌಲ್ಯದ ಆಕ್ಟಿವಾ ಸ್ಕೂಟರ್ 2 ಮೊಬೈಲ್‌ಪೋನ್, ಒಂದು ವೇಯಿಂಗ್‌ಮೀಶನ್, ಪೌಡರ್‌ಪ್ಯಾಕ್‌ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್‌ ಕವರ್ ಸಹಿತ 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.