ಉಡುಪಿ: ಲಾರಿಯೊಂದನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಮಂಜುನಾಥ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ಸಮಿತ್ ಕುಮಾರ್ ಎಮ್.ಜಿ (19) ಮತ್ತು ವಾಗೀಶ್ ಕೆದ್ಲಾಯ (19) ಎಂದು ಗುರುತಿಸಲಾಗಿದೆ. ವಾಗೀಶ್ ಸಾಲಿಗ್ರಾಮದ ಚಿತ್ರಪಾಡಿ ನಿವಾಸಿಯಾಗಿದ್ದು, ಸಮಿತ್ ಮೂಲತಃ ಶಿವಮೊಗ್ಗದವನಾಗಿದ್ದು ಸಾಲಿಗ್ರಾಮದಲ್ಲಿ ವಾಸವಿದ್ದರು. ಮೃತ ವಿದ್ಯಾರ್ಥಿಗಳು ಉಡುಪಿಯ ಖಾಸಗಿ ಸಂಜೆ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರು.
ಮಂಗಳವಾರ ಸಂಜೆ 7.30 ರ ಸುಮಾರಿಗೆ ಉಡುಪಿಯಿಂದ ಕಾಲೇಜು ಮುಗಿಸಿ ಬೈಕಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಟ್ರಕೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ಟ್ರಕ್ಕಿಗೆ ಡಿಕ್ಕಿ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದಿದ್ದು ರಸ್ತೆಗೆ ಅಪ್ಪಳಿಸಿದ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.