(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಆಧುನಿಕ ಕಾಲಘಟ್ಟದಲ್ಲಿ ಆರೋಗ್ಯ ಕಾಳಜಿ ಬಹುಮುಖ್ಯವಾಗಿದೆ. ಇಂತಹ ಶಿಬಿರಗಳ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವಾಗುತ್ತಿದ್ದು ಜನರ ಸಹಭಾಗಿತ್ವ ಕೂಡ ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು.
ಎಲ್.ಜಿ.ಫೌಂಡೇಶನ್ ಹಂಗಳೂರು-ಕುಂದಾಪುರ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೋಟೇಶ್ವರ ಪಂಚಾಯತ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಡಾ. ಪಿ. ದಯಾನಂದ ಪೈ ಮತ್ತು ಡಾ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಉಡುಪಿ, ದೇವಾಡಿಗ ಅಕ್ಷಯ ಕಿರಣ ಹಾಗೂ ಕುಂದಾಪುರ ಮತ್ತು ಕೋಟೇಶ್ವರ ದೇವಾಡಿಗ ಸಂಘದ ವತಿಯಿಂದ ದಿ. ಸುರೇಶ್ ಡಿ. ಪಡುಕೋಣೆಯವರ ಸ್ಮರಣಾರ್ಥ ಅಂಕದಕಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ನಡೆಸಿದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆರೋಗ್ಯ ನಮ್ಮ ರಕ್ಷಣೆ, ನಮ್ಮ ಜವಬ್ದಾರಿ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಪ್ರಕೃತಿ ಕೊಟ್ಟ ದೇಹದ ಜವಬ್ದಾರಿ ಅತಿ ಮುಖ್ಯವಾಗಿದೆ. ಜನರ ಆರೋಗ್ಯ ಕಾಳಜಿ ನಿಟ್ಟಿನಲ್ಲಿ ಎಲ್.ಜಿ ಫೌಂಡೇಶನ್ ನಾಲ್ಕನೆ ಬಾರಿ ಹಮ್ಮಿಕೊಂಡ ಈ ಆರೋಗ್ಯ ಸಂಬಂಧಿತ ಶಿಬಿರ ಶ್ಲಾಘನೀಯ ಎಂದರು.
ಸಮಾಜಸೇವಕರಾದ ನಿತ್ಯಾನಂದ ವಳಕಾಡು, ವಿಶು ಕುಮಾರ್ ಶೆಟ್ಟಿ, ವೈದ್ಯಾಧಿಕಾರಿಗಳಾದ ಡಾ. ನಾಗಭೂಷಣ್ ಉಡುಪ, ಡಾ. ನಾಗೇಶ್, ಡಾ. ಮಧುಕರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಎಲ್.ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ. ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ನಾಗೇಶ್, ದೇವಾಡಿಗ ಅಕ್ಷಯ ಕಿರಣದ ಪೋಷಕರಾದ ಮಧುಕರ ದೇವಾಡಿಗ, ಅಶೋಕ್ ದೇವಾಡಿಗ ಮುಂಬೈ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷ ಕೃಷ್ಣ ಗೊಲ್ಲ, ಕೋಟೇಶ್ವರ ದೇವಾಡಿಗ ಸಂಘದ ಅಧ್ಯಕ್ಷ ಚಂದ್ರಶೇಖರ ದೇವಾಡಿಗ, ಪ್ರಸಾದ ನೇತ್ರಾಲಯದ ವೈದ್ಯೆ ಡಾ. ಅರ್ಚನಾ ಶೆಟ್ಟಿ, ಕೋಟೇಶ್ವರ ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ಪೂರ್ಣಿಮಾ, ದಾನಿ ನಾಗರಾಜ ಡಿ. ಪಡುಕೋಣೆಯವರ ಮಾತೃಶ್ರಿ ಲಚ್ಚ ದೇವಾಡಿಗ, ಪುತ್ರ ಗುರುಕೃತಿಕ್, ಬಾಬು ಪಡುಕೋಣೆ ಮೊದಲಾದವರು ಉಪಸ್ಥಿತರಿದ್ದರು.
ರಾಮ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪ್ರಾರ್ಥಿಸಿದರು. ಸಮಾಜ ಸೇವಕ ಶಂಕರ ಅಂಕದಕಟ್ಟೆ ಪ್ರಸ್ತಾವನೆಗೈದರು. ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಸ್ವಾಗತಿಸಿದರು. ಪುರುಷೋತ್ತಮ ದಾಸ್ ವಂದಿಸಿದರು.
Comments are closed.