ಕರ್ನಾಟಕ

16 ದೋಸೆ ಪ್ಲೇಟ್​ಗಳನ್ನು ಬ್ಯಾಲೆನ್ಸ್​ ಮಾಡುತ್ತಾ ಗ್ರಾಹಕರಿಗೆ ನೀಡುವ ಹೋಟೆಲ್ ಸರ್ವರ್ ಕೆಲಸಕ್ಕೆ ಆನಂದ ಮಹೀಂದ್ರಾ‌‌ ಮೆಚ್ಚುಗೆ..!

Pinterest LinkedIn Tumblr

ಬೆಂಗಳೂರು: ​ 16 ದೋಸೆಯ ಪ್ಲೇಟ್​ಗಳನ್ನು ಬ್ಯಾಲೆನ್ಸ್​ ಮಾಡುವ ಹೊಟೆಲ್ ಸರ್ವರ್ (ಸಪ್ಲೈಯರ್) ಒಬ್ಬರ ಕುರಿತಾದ ವಿಡಿಯೋ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು ಆನಂದ ಮಹೀಂದ್ರಾ ಈತನ ಕೌಶಲಕ್ಕೆ ಮಾರುಹೋಗಿದ್ದಾರೆ.

 

ಬಾಣಸಿಗರು‌ ಕಾವಲಿಯಲ್ಲಿ ಹಾಕಿದ ದೋಸೆಯನ್ನು ಪ್ಲೇಟಿನಲ್ಲಿ‌ಜೋಡಿಸಿ 16 ದೋಸೆ ತಟ್ಟೆಗಳನ್ನು ಹೀಗೆ ಒಂದೇ ಸಲದಲ್ಲಿ ತಂದು ಗ್ರಾಹಕರಿಗೆ ಕೊಡುವ ವಿಡಿಯೋ ಇದಾಗಿದ್ದು ಆ ಹೋಟೆಲ್ ಬೆಂಗಳೂರಿನ‌ಪ್ರಸಿದ್ಧ ವಿದ್ಯಾರ್ಥಿ ಭವನ ಎನ್ನುವುದು ಮತ್ತೊಂದು ವಿಶೇಷ.

ಈ ವಿಡಿಯೋ ಟ್ವೀಟ್ ಮಾಡಿದ ಆನಂದ ಮಹೀಂದ್ರಾ “ನಾವು ‘ವೇಟರ್ ಪ್ರೊಡಕ್ಟಿವಿಟಿ’ ಅನ್ನು ಒಲಿಂಪಿಕ್ ಕ್ರೀಡೆಯಾಗಿ ಗುರುತಿಸಬೇಕಾಗಿದೆ. ಆ ಸಮಾರಂಭದಲ್ಲಿ ಈ ವ್ಯಕ್ತಿ ಚಿನ್ನಕ್ಕಾಗಿ ಸ್ಪರ್ಧಿಯಾಗುತ್ತಾನೆ” ಎಂದು ಬರೆದುಕೊಂಡಿದ್ದಾರೆ.

Comments are closed.