ಕರಾವಳಿ

ಮದುವೆಗೆಂದು ಲಾಕರ್‌ನಿಂದ ತಂದಿದ್ದ 7.26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

Pinterest LinkedIn Tumblr

ಉಡುಪಿ: ಮದುವೆಗೆಂದು ಲಾಕರ್‌ನಿಂದ ತಂದಿದ್ದ 180.5 ಗ್ರಾಂ ತೂಕದ 7.26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಠಾಣೆಗೆ ದೂರು ನೀಡಲಾಗಿದೆ.

ಹೂಡೆಯ ಅಫ್ರೀನ್‌ ಬಾನು ಅವರು ಹೊನ್ನಾಳದ ತಾಯಿ ಮನೆ ಸಮೀಪ ಸಂಬಂಧಿಕರ ಮನೆಯಲ್ಲಿ ಮದುವೆ ಸಮಾರಂಭ ಮುಗಿಸಿ ಮನೆಗೆ ಹೊರಡುವಾಗ ಚಿನ್ನಾಭರಣವಿದ್ದ ಬ್ಯಾಗನ್ನು ಕಾರಿನಲ್ಲಿ ಇಟ್ಟಿದ್ದರು. ತಾಯಿ ಮನೆಯಲ್ಲಿ ಚಹಾ ಕುಡಿದು 15 ನಿಮಿಷದಲ್ಲಿ ಹಿಂದಿರುಗಿದ್ದರು. ಮನೆಗೆ ಮರಳಿ ಸ್ವಲ್ಪ ಸಮಯದಲ್ಲಿ ಬ್ಯಾಗ್‌ ತೆರೆದು ನೋಡುವಾಗ ಚಿನ್ನಾಭರಣ ಕಾಣೆಯಾಗಿತ್ತು.

ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.