ಕುಂದಾಪುರ: ಅಡಿಕೆ ಕೊಯ್ಯಲು ತೆರಳಿದ್ದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ದಾರುಣ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಸಮೀಪದ ಕೋಣ್ಕಿ ಎಂಬಲ್ಲಿ ಗುರುವಾರ ನಡೆದಿದೆ.
ಕೋಣ್ಕಿ ಅಂಗಡಿ ಬೆಟ್ಟು ನಿವಾಸಿ ಭುಜಂಗ ಶೆಟ್ಟಿ (58) ಮೃತ ದುರ್ದೈವಿ.
ಘಟನೆ ವಿವರ: ಮನೆಯ ತೋಟದ ಅಡಿಕೆ ಕೊಯ್ಯಲು ಹಾಗೂ ಅಡಿಕೆ ಗರಿಗಳನ್ನು ಕತ್ತರಿಸಲು ಭುಜಂಗ ಶೆಟ್ಟಿ ತೆರಳಿದ್ದು ಉದ್ದದ ಕಬ್ಬಿಣದ ಕೊಕ್ಕೆ ಮೂಲಕ ಕೆಲಸ ಮಾಡುತ್ತಿರುವಾಗ ತೋಟದಲ್ಲಿ ಹಾದುಹೋದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಗೊಳ್ಳಿ ಪೊಲೀಸರು ಸ್ಥಳಲ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಶವ ಸಾಗಿಸಲು ಗಂಗೊಳ್ಳಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಕೇಶವ, ಚಾಲಕ ದಿನೇಶ್ ಬೈಂದೂರು, ಗಂಗೊಳ್ಳಿ 24×7 ಅಂಬುಲೆನ್ಸ್ ಇದರ ಇಬ್ರಾಹಿಂ ಗಂಗೊಳ್ಳಿ, ಸ್ವಯಂಸೇವಕರಾದ ಅಬ್ರಾರ್ ಸಫ್ವಾನ್ ಹಾಗೂ ಸ್ಥಳೀಯರು ಸಹಕರಿಸಿದರು.
Comments are closed.