ಪ್ರಮುಖ ವರದಿಗಳು

ಬಾಲ್ಯದಲ್ಲಿ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ: ನಟಿ ಖುಷ್ಬು

Pinterest LinkedIn Tumblr

ಮುಂಬಯಿ: ಬಾಲಿವುಡ್‌ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್‌ ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದು ಬಾಲ್ಯದಲ್ಲಾದ ಕರಾಳ ಘಟನೆಯ ಬಗ್ಗೆ ಮಾಧ್ಯಮವೊಂದರ ಜೊತೆ ನಟಿ ಖುಷ್ಬು ಮಾತನಾಡಿದ್ದಾರೆ.

ನಾನು ಬಾಲ್ಯದಲ್ಲಿರುವಾಗಲೇ ನನ್ನ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾಗಿದ್ದೆ. ನನ್ನ ತಾಯಿ ಮೇಲೆ ತಂದೆ ಪ್ರತಿನಿತ್ಯ ದೌರ್ಜನ್ಯವೆಸಗುತ್ತಿದ್ದರು. ನನ್ನ ಬಾಲ್ಯ ದೌರ್ಜನ್ಯದ ದಿನಗಳಿಂದ ಕೂಡಿತ್ತು. ನಾನು 8 ವರ್ಷದವಳಿದ್ದಾಗ ಸ್ವತಃ ತಂದೆಯೇ ನನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸೆಗುತ್ತಿದ್ದರು ಎಂದು ಕರಾಳ ದಿನದ ಬಗ್ಗೆ ಮಾತನಾಡಿದ್ದಾರೆ.

ನನ್ನ ಮೇಲೆ ಏನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳವುದು ನನ್ನ ತಾಯಿಗೂ ಸಾಧ್ಯವಾಗಿಲ್ಲ. ಏಕೆಂದರೆ ನನ್ನ ತಾಯಿ ಆತನ ಪತಿ ಏನೇ ಮಾಡಿದರೂ ಆತನೇ ತನ್ನ ಪರಮ ದೈವ ಎನ್ನುವ ಮನಸ್ಥಿತಿಯಲ್ಲಿದ್ದವರು. ನನಗೆ 15 ವರ್ಷವಾದಾಗ ನನ್ನ ತಂದೆಯ ಕ್ರೌರ್ಯತೆ ವಿರುದ್ಧ ನಾನು ಧ್ವನಿ ಎತ್ತಿದೆ. ನನಗೆ 16 ವರ್ಷವೂ ಆಗಿರಲಿಲ್ಲ ತಂದೆ ನಮ್ಮನ್ನು ಬಿಟ್ಟು ಹೋದರು.

ನಟಿ, ನಿರೂಪಕಿ, ನಿರ್ಮಾಪಕಿಯಾಗಿ ಸಿನಿಲೋಕದಲ್ಲಿ ಮಿಂಚಿದ ಖುಷ್ಬು 2010 ರಲ್ಲಿ ಡಿಎಂಕೆ ಪಕ್ಷಕ್ಕೆ ಸೇರಿ ರಾಜಕೀಯ ಯಾನವನ್ನು ಆರಂಭಿಸಿದರು. ಆ ಬಳಿಕ ಕಾಂಗ್ರೆಸ್‌ ಸೇರಿ 2021 ರಲ್ಲಿ ತಮಿಳುನಾಡು ವಿಧಾನ ಸಭೆಯಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಸದ್ಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.

Comments are closed.