ಕರಾವಳಿ

ಊಟದ ತಟ್ಟೆ ತೊಳೆಯುವ ವಿಚಾರದಲ್ಲಿ ಗಲಾಟೆ; ಮಂಗಳೂರಿನಲ್ಲಿ ಯುಪಿ ಮೂಲದ ಯುವಕನ ಕೊಲೆ

Pinterest LinkedIn Tumblr

ಮಂಗಳೂರು: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರು ಗ್ರಾಮದ ಪೋಸ್ಟಲ್ ಗಾರ್ಡ್ ಸೈಟ್ ನಲ್ಲಿ ಊಟ ಮಾಡಿದ ತಟ್ಟೆ ತೊಳೆಯುವ ವಿಚಾರದಲ್ಲಿ ಕೊಲೆಯೊಂದು ನಡೆದಿದೆ.

ಕೂಲಿ ಕಾರ್ಮಿಕನಾಗಿದ್ದ ಉತ್ತರ ಭಾರತ ಮೂಲದ ಸಂಜಯ್ ಎಂದು ಗುರುತಿಸಲಾಗಿದೆ. ಸಂಜಯ್ ಮತ್ತು ಸೋಹಾನ್ ಯಾದವ್ (19) ಇಬ್ಬರ ನಡುವೆ ಜಗಳ ನಡೆದಿದ್ದು, ಸೋಹನ್ ಯಾದವ್ ಸಂಜಯ್ ನನ್ನು ಬಲವಾಗಿ ಹಿಂದಕ್ಕೆ ತಳ್ಳಿದ್ದ. ಕೆಳಗೆ ಬಿದ್ದ ಸಂಜಯ್ ಅವರ ತಲೆಗೆ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಕೊನೆಯುಸಿರೆಳೆದಿದ್ದ.

ಘಟನೆ ಮಾ.5 ರಂದು ರಾತ್ರಿ 8.30ಕ್ಕೆ ನಡೆದಿತ್ತು. ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಸೋಹನ್‌ನನ್ನು ಬಜ್ಪೆ ಪೊಲೀಸರು ಮಂಗಳೂರು ರೈಲು ನಿಲ್ದಾಣದ ಬಳಿ ಮಾ.7 ರಂದು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments are closed.