ಕುಂದಾಪುರ: ‘ನನ್ನ ಸಹೋದರಿ’ ಕುಂದಾಪುರ ವಲಯ ಸಮಿತಿಯ ಲೋಗೋ ಅನಾವರಣ ಮತ್ತು ಜಾಗೃತಿ ಕಾರ್ಯಕ್ರಮವು ಶುಕ್ರವಾರ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ನಲ್ಲಿ ಜರುಗಿತು.
‘ನನ್ನ ಸಹೋದರಿ’ ಪ್ರಧಾನ ಕಾರ್ಯದರ್ಶಿ ಮೌಲಾನ ಝಮೀರ್ ಅಹ್ಮದ್ ರಶಾದಿಯವರ ಕಿರಾಅತ್ ನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಅಬ್ದುಲ್ ಖಾದರ್ ಮೂಡಗೋಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಸಯ್ಯದ್ ಜಾಫರ್ ತಂಙಲ್ ಕೋಟೇಶ್ವರ ಮತ್ತು ಮೌಲಾನಾ ಉಬೈದುಲ್ಲಾ ನದ್ವೀ ಕಂಡ್ಲೂರು ಸಂಸ್ಥೆಯ ಲೋಗೋ ಅನಾವರಣಗೊಳಿಸಿ ಶುಭ ಹಾರೈಸಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ ಪ್ರೆಸೆಂಟೇಶನ್ ಮೂಲಕ ಬಡತನದ ಕಾರಣದಿಂದಾಗಿ ಮದುವೆಯಾಗಲು ಸಾಧ್ಯವಾಗದ ಸಮುದಾಯದ ಸಹೋದರಿಯರ ಪರಿಸ್ಥಿತಿ ಮತ್ತು ನಮ್ಮ ಜವಾಬ್ದಾರಿಗಳ ಬಗ್ಗೆ ವಿವರಿಸಿದರು ಮತ್ತು ಶ್ರೀಮಂತರು ಬಡ ಹೆಣ್ಣುಮಕ್ಕಳನ್ನು ತಮ್ಮ ಸಹೋದರಿ ಎಂಬ ಭಾವನೆಯೊಂದಿಗೆ ಅವರ ಮದುವೆಯ ಜವಾಬ್ದಾರಿ ವಹಿಸಬೇಕೆಂದು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಫೀಕ್ ಮಾಸ್ಟರ್ ಮಂಗಳೂರು, ಉದ್ಯಮಿ ಮತ್ತು ಸಮಾಜ ಸೇವಕ ಅಬ್ದುಲ್ ಸತ್ತಾರ್ ಕೋಟೇಶ್ವರ ಹಾಗೂ ಸೌದಿ ಅರೇಬಿಯಾದ ಉದ್ಯಮಿ ಮೊಹಮ್ಮದ್ ಆಸಿಫ್ ಪಾರಂಪಳ್ಳಿಯವರನ್ನು ‘ನನ್ನ ಸಹೋದರಿ’ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ವಲಯದ ಜಮಾಅತ್ ಹೊಣೆಗಾರರು, ಸಾಮಾಜಿಕ ಕಾರ್ಯಕರ್ತರು, ಗಣ್ಯರು ಭಾಗವಹಿಸಿದರು.
Comments are closed.