ಕರಾವಳಿ

ಹೆಮ್ಮಾಡಿಯ ಅಪಾರ್ಟ್‌ಮೆಂಟ್ ರೂಂನಲ್ಲಿ ಸಿಲುಕಿದ್ದ 70 ವರ್ಷದ ವ್ಯಕ್ತಿಯನ್ನು ರಕ್ಷಿಸಿದ ಕುಂದಾಪುರ ಅಗ್ನಿಶಾಮಕದಳ ತಂಡ..!

Pinterest LinkedIn Tumblr

ಕುಂದಾಪುರ: ಅಪಾರ್ಟ್‌ಮೆಂಟ್ ಒಂದರ ಕೋಣೆಯಲ್ಲಿ ಸಿಲುಕಿಕೊಂಡ ವೃದ್ಧರೊಬ್ಬರನ್ನು ಅಗ್ನಿಶಾಮಕದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯ ವಸತಿ ಸಮುಚ್ಚಯವೊಂದರಲ್ಲಿ ರವಿವಾರ ನಡೆದಿದೆ.

ಅಪಾರ್ಟ್‌ಮೆಂಟ್ ನ 4ನೇ ಮಹಡಿಯಲ್ಲಿನ ರೂಮಿನೊಳಗಡೆ ಇದ್ದ 70 ವರ್ಷ ಪ್ರಾಯದ ಮಹಮ್ಮದ್ ಬಿ.ಎಸ್ ಎನ್ನುವರು ಕೊಠಡಿಯಲ್ಲಿ ಸಿಲುಕಿಕೊಂಡಿದ್ದು ಹೊರಗಡೆಯಿಂದ ರೂಮ್ ಲಾಕ್ ಆಗಿತ್ತು. ತಕ್ಷಣ ಧಾವಿಸಿದ ಕುಂದಾಪುರ ಅಗ್ನಿಶಾಮಕ ತಂಡವು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ ಗೌಡ ಅವರ ನೇತೃತ್ವದಲ್ಲಿ ಜಲವಾಹನದ ಮೇಲ್ಗಡೆಯಿಂದ ಏಣಿಯನ್ನು ಇರಿಸಿ ಅಗ್ನಿಶಾಮಕರಾದ ಆಸಿಫ್ ಅಲಿ ಅವರು ಏಣಿ ಮೂಲಕ ಅಪಾರ್ಟ್‌ಮೆಂಟ್ ಕಟ್ಟಡದ ಬಾಲ್ಕನಿಗೆ ತೆರಳಿ ಲಾಕ್ ತೆಗೆದು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ ಗೌಡ, ಪ್ರಮುಖ ಅಗ್ನಿಶಾಮಕ ರವೀಂದ್ರ ಎಸ್. ದೇವಾಡಿಗ, ಅಗ್ನಿಶಾಮಕ ಚಾಲಕ ಮುಸ್ತಾಫ್, ಅಗ್ನಿಶಾಮಕರಾದ ಆಸಿಫ್ ಅಲಿ, ಅಭಿಷೇಕ್ ಢಂಗ್, ಸಮಿರುಲ್ಲಾ ಮುಗುಟಖಾನ್ ಇದ್ದರು.

Comments are closed.