ನವದೆಹಲಿ: ಅರಶಿನ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಕಾರಣ ಮಾರುಕಟ್ಟೆ ಮದ್ಯಸ್ಥಿಕೆ ಯೋಜನೆಯಡಿಯಲ್ಲಿ ಅರಶಿನ ಬೆಳೆಯನ್ನು ಖರೀದಿಸಬೇಕೆಂದು ರಾಜ್ಯದ ಅರಶಿನ ಬೆಳೆಗಾರರ ನಿಯೋಗ ಕಳೆದ ವಾರವಷ್ಟೆ ನನಗೆ ಮನವಿ ಸಲ್ಲಿಸಿ, ಅರಶಿನ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಮನವಿ ಮಾಡಿದ್ದರು. ಕರ್ನಾಟಕ ರಾಜ್ಯ ಸರ್ಕಾರವು ಸಹ ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಮನವಿಗೆ ಸ್ಪಂದಿಸಿದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಆದೇಶಿಸಿದ್ದರು. ಶೀಘೃವಾಗಿ ಕೇಂದ್ರದಿಂದ ಆದೇಶ ಹೊರಡಿಸಿ, ಅರಿಸಿಣ ಬೆಳೆಯ ರೈತರ ಕಷ್ಟಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಒದಗಿಸಲಾಗಿದೆ.
2022-23 ನೆ, ಸಾಲಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಅರಿಸಿಣ ಖರೀದಿಗೆ ಪ್ರತಿ ಕ್ವಿಂಟಲ್ ಗೆ ರೂ.6,694/- ರಂತೆ ಅನುಮೋದನೆಯನ್ನು ದಿನಾಂಕ 22 ಮಾರ್ಚ್ 2023ರಂದು ನೀಡಲಾಗಿದೆ. ತ್ವರಿತವಾಗಿ ರಾಜ್ಯ ಸರ್ಕಾರ ಅರಶಿನದ ಖರೀದಿ ಪ್ರಕ್ರಿಯೆ ಕೈಗೊಳ್ಳಲಿದೆ.
ಅರಶಿನ ಬೆಳೆಗೆ ಪ್ರಚಲಿತ ಮಾರುಕಟ್ಟೆ ದರ ರೂ. 5200 (ಪ್ರತಿ ಕ್ವಿಂಟಲ್ ಗೆ) ಇರುತ್ತದೆ, ಪ್ರಸ್ತುತ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ರೂ. 6694/- (ಪ್ರತಿ ಕ್ವಿಂಟಲ್ ಗೆ) ಇರುತ್ತದೆ. ಆದುದರಿಂದ ರೈತರಿಗೆ ಮಾರುಕಟ್ಟೆ ಮದ್ಯ ಪ್ರವೇಶ ಯೋಜನೆಯಿಂದ ಪ್ರತಿ ಕ್ವಿಂಟಲ್ ಗೆ, ಅಂದಾಜು ರು. 1400 ರಿಂದ ರೂ.1500 ಗಳಷ್ಟು ಲಾಭವಾಗುತ್ತದೆ.
ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ರೈತರಿಗೆ ಕೇಂದ್ರ ಸರ್ಕಾರದ ಈ ಆದೇಶದಿಂದ ಅನುಕೂಲವಾಗಲಿದೆ.
ದೇಶದ ರೈತರ ಹಿತ ಕಾಯುವಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿದ್ದು, ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದೆ ರಾಜ್ಯದ ಅರಿಸಿಣ ಬೆಳೆಗಾರರ ಕಷ್ಟಕ್ಕೆ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸ್ಪಂದಿಸಿದೆ.
ಕರ್ನಾಟಕ ರಾಜ್ಯದ ಅರಶಿನ ಬೆಳೆಗಾರರ ಸಮಸ್ಯೆಗೆ ತ್ವರಿತವಾಗಿ ಪರಿಹಾರವನ್ನು ಒದಗಿಸಿದ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರಸಿಂಗ್ ತೋಮರ್ ಅವರಿಗೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರಿಗೆ ಶೋಭಾ ಕರಂದ್ಲಾಜೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
Comments are closed.