ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ, ಸಮಾಜ ಸೇವಕ, ಕೊಡುಗೈ ದಾನಿ ವಾಮನ ಮರೋಳಿ ಅವರು ಶನಿವಾರ ರಾತ್ರಿ ವಿಧಿವಶರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಮುದಾಯದ ಯುವಕರಿಗೆ ಪ್ರೋತ್ಸಾಹ ಮಾಡಿದ ನಾಯಕ ವಾಮನ ಮರೋಳಿ ಅವರು ಮಂಗಳೂರು ಸಂಘದ ಸಭಾಭವನಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಿದ್ದರು.
ಕ್ರೀಯಾಶೀಲ ವ್ಯಕ್ತಿತ್ವದ ವಾಮನಮರೋಳಿ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು ಅವರ ಅಗಲುವಿಕೆಗೆ ಕುಟುಂಬ ವರ್ಗ, ಹಿತೈಷಿಗಳು, ದೇವಾಡಿಗ ಸಮುದಾಯದವರು ಕಂಬನಿ ಮಿಡಿದಿದ್ದಾರೆ.
ಮಾ.27 ಸೋಮವಾರ ಮುಂಜಾನೆ 9 ಗಂಟೆಯಿಂದ 11.30ರವರೆಗೆ ಬಲ್ಮಠದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಕದ್ರಿಯಲ್ಲಿ ಅಂತಿಮ ವಿಧಾನ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
Comments are closed.