ಹಾವೇರಿ: ಶಿಗ್ಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸುವ ಹಿನ್ನೆಲೆ ರೋಡ್ ಶೋ ನಡೆಸಿದ್ದು ಜನಸಾಗರವೇ ಹರಿದು ಬಂದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಚಿತ್ರನಟ ಸುದೀಪ್ ಆಗಮನದ ಹಿನ್ನೆಲೆಯಲ್ಲಿ ಸಹಸ್ರಾರು ಜನರು ಪಟ್ಟಣದ ಕಿತ್ತೂರು ಚನ್ನಮ್ಮ ಸರ್ಕಲ್ ನಲ್ಲಿ ಜಮಾಯಿಸಿದರು.
ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ರೋಡ್ ಶೋ ಆರಂಭವಾಗಿದ್ದು. ಸಂತೆ ಮೈದಾನ, ಹಳೇ ಬಸ್ ನಿಲ್ದಾಣ ಮಾರ್ಗದ ಮೂಲಕ ತಾಲ್ಲೂಕು ಕ್ರೀಡಾಂಗಣ ತಲುಪಿದ್ದು ತಾಲ್ಲೂಕು ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ನಡೆಯಿತು.
ಈ ಮೊದಲು ಜೆ.ಪಿ.ನಡ್ಡಾ ಮತ್ತು ಚಿತ್ರನಟ ಸುದೀಪ್ ಶಿಗ್ಗಾವಿಯ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದ್ದು, ಬೊಮ್ಮಾಯಿ ಜತೆಗೆ ಮಾತುಕತೆ ನಡೆಸಿದ್ದರು.
ಇನ್ನು ಅಪಾರ ಜನಸ್ತೋಮದ ಬಗ್ಗೆ ಜೆ.ಪಿ ನಡ್ಡಾ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು, “ಹಾವೇರಿ ಜನತೆ ಬಿಜೆಪಿಗೆ ನೀಡುತ್ತಿರುವ ಉತ್ಸಾಹಭರಿತ ಬೆಂಬಲ ಕಂಡು ಮೂಕವಿಸ್ಮಿತನಾಗಿದ್ದೇನೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಅಭಿವೃದ್ಧಿ ಪರವಾದ ರಾಜಕೀಯದ ಮೇಲೆ ಜನರಿಗಿರುವ ನಂಬಿಕೆಗೆ ಇಂದಿನ ರೋಡ್ ಶೋಗೆ ಆಗಮಿಸಿದ ಅಪಾರ ಜನ ಸಮೂಹವೇ ಸಾಕ್ಷಿಯಾಗಿದೆ” ಎಂದಿದ್ದಾರೆ.
Comments are closed.