ಕರ್ನಾಟಕ

ಗೀತಾ ಶಿವರಾಜಕುಮಾರ್ ಕಾಂಗ್ರೆಸ್ ಸೇರ್ಪಡೆ; ಮಧು ಪರ ಪ್ರಚಾರಕ್ಕೆ ಶಿವರಾಜಕುಮಾರ್ ಬರ್ತಾರೆ: ಗೀತಾ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ದೊಡ್ಮನೆ ಸೊಸೆ ಗೀತಾ ಶಿವರಾಜ್‌ ಕುಮಾರ್‌ ಅವರು ಶುಕ್ರವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ವೇಳೆ ಮಾತನಾಡಿದ ಅವರು, ಮಧು ಬಂಗಾರಪ್ಪ ಪರ ಪ್ರಚಾರಕ್ಕೆ ನಟ, ಪತಿ ಶಿವರಾಜ್‌ ಕುಮಾರ್‌ ಅವರು ಬರುತ್ತಾರೆ ಎಂದರು.

‘ನನ್ನ ತಮ್ಮ ಮಧು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದಾಗಲೇ ನಾನು ಅವರೊಂದಿಗೆ ಇದ್ದೇನೆ, ಪಕ್ಷದ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದೇನೆ. ಶಿವರಾಜ್‌ ಕುಮಾರ್‌ ಅವರೂ ಸಹ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಶೂಟಿಂಗ್‌ ಇರುವ ಕಾರಣ, ಸಮಯ ಮಾಡಿಕೊಂಡು ಬರಲಿದ್ದಾರೆ’ ಎಂದು ಗೀತಾ ಶಿವರಾಜ್‌ ಕುಮಾರ್‌ ಹೇಳಿದರು.

ಮೊದಲಿಂದಲೂ ರಾಜಕೀಯದ ಬಗ್ಗೆ ನನಗೆ ಒಲವು ಇದ್ದೇ ಇತ್ತು. ಕನಕಪುರಕ್ಕೆ ಸ್ಥಳಾಂತರಗೊಳ್ಳುತ್ತೇವೆ. ಶೀಘ್ರವೇ ಅಲ್ಲಿಯೇ ಮನೆ ಕಟ್ಟಿಸಲಿದ್ದೇವೆ ಎಂದರು.

Comments are closed.