ಕುಂದಾಪುರ: ಆಟೋ ರಿಕ್ಷಾ ಚಾಲಕ ಅತೀ ವೇಗ ಹಾಗೂ ಅಜಾಗೂರಕತೆಯಿಂದ ಚಲಾಯಿಸಿಕೊಂಡುಬಂದು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದ್ದು ಹಿಂಬದಿ ಸವಾರ ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಗ್ರಾಮದ ಆನಗೋಡು ಸಮೀಪದ ತ್ರಾಸಿ-ಮೊವಾಡಿ ರಸ್ತೆಯಲ್ಲಿ ನಡೆದಿದೆ.
ಕುಂದಾಪುರದ ನಿವಾಸಿ ಭಾಸ್ಕರ (33) ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟ ದುರ್ದೈವಿ.
ಘಟನೆ ವಿವರ: ಭಾನುವಾರ ತಡರಾತ್ರಿ ವೇಳೆಗೆ ತ್ರಾಸಿ ಸಮೀಪದ ಮೊವಾಡಿ-ತ್ರಾಸಿ ಡಾಮಾರು ರಸ್ತೆಯಲ್ಲಿ ರಿಕ್ಷಾ ಚಾಲಕ ಗುರುರಾಜ ಪೂಜಾರಿ ಎನ್ನುವರು ಭಾಸ್ಕರ ಅವರನ್ನು ಕುಳ್ಳೀರಿಸಿಕೊಂಡು ಹೋಗುತ್ತಿದ್ದಾಗ ವೇಗದಲ್ಲಿದ್ದ ರಿಕ್ಷದ ಬ್ರೇಕ್ ಒಮ್ಮೆಲೆ ಹಾಕಿದ್ದು ರಸ್ತೆ ಸಮೀಪದ ತೆಂಗಿನ ಮರಕ್ಕೆ ರಿಕ್ಷಾ ಡಿಕ್ಕಿಯಾಗಿದೆ. ಈ ಸಂದರ್ ರಿಕ್ಷಾ ಹಿಂಭಾಗ ಕುಳಿತ ಭಾಸ್ಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯರ ಸಹಕಾರದಲ್ಲಿ ಗಂಗೊಳ್ಳಿ ಆಪತ್ಬಾಂಧವ 24*7 ಅಂಬುಲೆನ್ಸ್ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಡಿದ್ದಾರೆ ಎಂದು ತಿಳಿದುಬಂದಿದೆ. ರಿಕ್ಷಾ ಚಾಲಕ ಗುರುರಾಜ ಪೂಜಾರಿ ಅವರಿಗೂ ಗಾಯಗಳಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.