ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಒಂದುವರ್ಷದ ಪೂಜಾ ಅವಧಿ ಹಸ್ತಾಂತರ ಕಾರ್ಯಕ್ರಮ ನೆರವೇರಿತು.
ಅರ್ಚಕರಾದ ದೇವಿದಾಸ ಉಪಾಧ್ಯಾಯರಿಂದ ಮುಂದಿನ 2023 ಜೂನ್ 16 ರಿಂದ 2024 ಜೂನ್ 15 ರವರೆಗಿನ ಪೂಜಾ ಜವಾಬ್ದಾರಿಯನ್ನು ದೇವತಾ ಪ್ರಾರ್ಥನೆ ಯೊಂದಿಗೆ ಶ್ರೀಷ ಉಪಾಧ್ಯಾಯ ಹಾಗೂ ಸಹೋದರಿಗೆ
ಹಸ್ತಾಂತರರಿಸಿದರು.
ವಿದ್ವಾನ್ ಹೂವಿನಕೆರೆ ವಾದಿರಾಜ ಭಟ್ಟರು, ನೇರಂಬಳ್ಳಿ ಪ್ರಾಣೇಶ ತಂತ್ರಿಗಳು ಹಾಗೂ ಇತರ ವೈದಿಕರ ನೇತೃತ್ವದಲ್ಲಿ ಈ ವಿಧಿ ವಿಧಾನಗಳು ನೆರೆವೇರಿತು. ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಕೆ.ರಮಣ ಉಪಾಧ್ಯಾಯ, ಧರ್ಮಧರ್ಶಿ ಕೆ. ವಿಠಲ ಉಪಾಧ್ಯಾಯ ಹಾಗೂ ಮಾಜಿ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಉಪಸ್ಥಿತತರಿದ್ದರು. ಅರ್ಚಕ ಮಂಡಳಿಯ ಸರ್ವ ಸದಸ್ಯರು, ಉಪಾಧ್ಯಾಯ ಕಟುಂಬದವರು, ಕಛೇರಿಯ ಸಿಬ್ಬಂದಿಯವರು ಹಾಜರಿದ್ದರು.
ನಂತರ ಶ್ರೀ ದೇವರಿಗೆ ನೂತನ ಪರ್ಯಾಯ ಅರ್ಚಕರಾದ ಶ್ರೀಷ ಉಪಾಧ್ಯಾಯ ಸಹೋದರರಿಂದ ಭಕ್ತಾದಿಗಳ ಸಮ್ಮುಕದಲ್ಲಿ ಲೋಕ ಕಲ್ಯಣಾರ್ಥವಾಗಿ ಸಹಸ್ರಾವರ್ತನ ಉಪನಿಷತ್ ಹೋಮ ನೆರವೇರಿತು.
Comments are closed.