ಕುಂದಾಪುರ: ಮನೆಯೊಂದಕ್ಕೆ ಆಗಮಿಸಿದ ಚಿರತೆಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಕೊಲ್ಲೂರು ಸಮೀಪದ ನಾಗೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು ಗಣೇಶ್ (48) ಎಂಬುವರು ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗೋಡಿ ಚೆಕ್ ಪೋಸ್ಟ್ ಸಮೀಪದ ಮರಾಠಿ ಗ್ರಾಮದ ಕಂಚಿಕೇರಿ ಎಂಬಲ್ಲಿ ಮನೆಯಲ್ಲಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಮನೆ ಎದುರಿಗಿದ್ದ ನಾಯಿ ಹಿಡಿಯಲು ಬಂದಾಗ ನಾಯಿ ಗಾಬರಿಗೊಂಡು ಕಿಟಕಿ ಮೂಲಕ ಮನೆಯೊಳಕ್ಕೆ ಹೋಗಿದ್ದು ನಾಯಿ ಬೆನ್ನತ್ತಿ ಚಿರತೆಯೂ ಮನೆಯೊಳಗೆ ಹೋಗಿ ಗಣೇಶ್ ಅವರ ಮೇಲೆ ದಾಳಿ ನಡೆಸಿದೆ. ಕೂಡಲೇ 108 ಆಂಬುಲೆನ್ಸ್ ಗೆ ಕರೆ ಮಾಡಿದ್ದು ಆಂಬುಲೆನ್ಸ್ ಆಲೂರು 108 ವಾಹನದ ಇಎಂಟಿ ರಾಘವೇಂದ್ರ, ಪೈಲಟ್ ಅಶೋಕ್ ಸ್ಥಳಕ್ಕೆ ಭೇಟಿಯಿತ್ತು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಸಲುವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊದಲಿಗೆ ಹುಲಿ ದಾಳಿ ಎಂದು ಸುದ್ದಿಯಾಗಿದ್ದು ಇದು ಚಿರತೆ ದಾಳಿ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.
Comments are closed.