ಕರಾವಳಿ

ಮನೆಯಿಂದ ನಾಪತ್ತೆಯಾದ ಜಡ್ಕಲ್ ಯುವಕನಿಗೆ ಮುಂದುವರಿದ ಶೋಧ: ನದಿಯಲ್ಲಿ ಕೊಚ್ಚಿಹೋದ ಬಗ್ಗೆ ಶಂಕೆ

Pinterest LinkedIn Tumblr

ಕೊಲ್ಲೂರು: ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ. ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ಕಾಣೆಯಾದ ಯುವಕ.

ಇವರು ಜು.22ರಂದು ತನ್ನ ವಾಸದ ಮನೆಯಾದ ಮಕ್ಕೆಯ ಕೊಳಕೆಹೊಳೆ ಎಂಬಲ್ಲಿ ಮನೆ ಮಂದಿಯೊಂದಿಗೆ ಊಟ ಮಾಡಿ ಮಲಗಿದ್ದು ಜು.23ರಂದು ಬೆಳಗ್ಗೆ ಮನೆಯವರು ಎದ್ದಾಗ ಸುರೇಶ್ ಮನೆಯಿಂದ ನಾಪತ್ತೆಯಾದ ಬಗ್ಗೆ ಸಹೋದರ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ಸುರೇಶ ಪತ್ತೆಗೆ ಗ್ರಾಮಸ್ಥರ ನೆರವಿನೊಂದಿಗೆ ಶೋಧಕಾರ್ಯ ಮುಂದುವರೆದಿದ್ದು ಮನೆಪಕ್ಕದ ನದಿನೀರಿನಲ್ಲಿ ಕೊಚ್ಚಿ ಹೋದ ಬಗ್ಗೆ ಸಂಬಂದಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲ್ಲೂರು ಠಾಣೆ ಉಪನಿರಿಕ್ಷಕಿ ಸುಧಾರಾಣಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.