ಕುಂದಾಪುರ: ತಾಲೂಕಿನ ಗಾವಳಿ-ಕಕ್ಕುಂಜೆ ರಸ್ತೆಯ ಮಕ್ಕಿಮನೆ ಸಮೀಪ ವೀಪರಿತ ಮಳೆಯಿಂದ ತೋಡಿಗೆ ಬಿದ್ದು ಮೃತಪಟ್ಟ ಹರ್ಕಾಡಿ ನಿವಾಸಿ ಗೋಕುಲದಾಸ್ ಪ್ರಭು (54) ಎನ್ನುವರ ಪತ್ನಿಗೆ ಸರಕಾರ ವಿಪತ್ತು ನಿಧಿಯಿಂದ ಮಂಜೂರದ 5 ಲಕ್ಷ ರೂ. ಚೆಕ್ ಅನ್ನು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶೋಭಾಲಕ್ಷ್ಮಿ, ಕಂದಾಯ ನಿರೀಕ್ಷಕ ದಿನೇಶ್ ಹುದ್ದರ, ಗ್ರಾಮ ಲೆಕ್ಕಿಗ ಅನಿಲ್ ಕುಮಾರ್ ಶೆಟ್ಟಿ, ಸಹಾಯಕ ರಘುರಾಮ್, ಮುಖಂಡರಾದ ನಾರಾಯಣ ಶೆಣೈ ಗಾವಳಿ, ಶ್ರೀಧರ್ ಶೆಟ್ಟಿ ಬಿದ್ಕಲಕಟ್ಟೆ, ಮಧುವನ ಮಾಧವ ಹೆಗ್ಡೆ, ಭಾಗೀರಥಿ ಪ್ರಭು, ಗ್ರಾಂ. ಪಂ. ಅಧ್ಯಕ್ಷ ಜಗನ್ನಾಥ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ನರಾಡಿ, ನಾಗೇಶ್ ಪಡಿಯಾರ ಗಾವಳಿ, ಶಂಕರ ಮೊಗವೀರ ಮತ್ಯಾಡಿ, ಉದ್ಯಮಿ ಮಹೇಶ್ ಶೆಣೈ ಗಾವಳಿ, ಕೇಶವ್ ಪ್ರಭು ಗಾವಳಿ, ಉದ್ಭವ್ ಕುಮಾರ್ ಶೆಟ್ಟಿ, ಪ್ರಶಾಂತ್ ಕಕ್ಕುಂಜೆ, ಗ್ರಾಂ. ಪಂ. ಸದಸ್ಯರಾದ ಗಣೇಶ್ ಶೆಟ್ಟಿ ಕೊಳನಕಲ್, ಜಯಪ್ರಕಾಶ್ ಶೆಟ್ಟಿ ಚಿಟ್ಟಿಬೈಲು, ಮಾಜಿ ಸದಸ್ಯೆ ವಸಂತಿ ಶೆಟ್ಟಿ ಹರ್ಕಾಡಿ ಉಪಸ್ಥಿತರಿದ್ದರು.
Comments are closed.