ಕರಾವಳಿ

ಶಿರೂರು ಅಳ್ವೆಗದ್ದೆಯಲ್ಲಿ ಕೈರಂಪಣಿ ಮೀನುಗಾರಿಕೆಗೆ ತೆರಳಿ ಸಮುದ್ರ ಪಾಲಾಗಿದ್ದ ಯುವಕರಿಬ್ಬರ ಮೃತದೇಹ ಪತ್ತೆ

Pinterest LinkedIn Tumblr

ಕುಂದಾಪುರ: ಕೈರಂಪಣಿ ಮೀನುಗಾರಿಕೆಗೆ ತೆರಳಿ ಸಮುದ್ರ ಪಾಲಾಗಿದ್ದ ಮುಸಾಭ್(22) ಹಾಗೂ ನಝಾನ್(24) ಮೃತದೇಹವು ಸೋಮವಾರ ಮುಂಜಾನೆ ಶಿರೂರು ಅಳ್ವೆಗದ್ದೆ ಕಡಲ ತೀರದಲ್ಲಿ ಪತ್ತೆಯಾಗಿದೆ.

ಭಾನುವಾರ ಸಂಜೆ ಕೈರಂಪಣಿ ಮೀನುಗಾರಿಕೆಗೆ ತೆರಳಿದಾಗ ಅಲೆಯ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು ಭಾನುವಾರ ಸಂಜೆಯಿಂದ ಶೋಧಕಾರ್ಯ ನಡೆಸಲಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಂದೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಮುಸಾಭ್ ಮತ್ತು ಬಾವು ನಝಾನ್ ಇಬ್ಬರು ಅವಿವಾಹಿತರಾಗಿದ್ದರು. ಮುಸಾಭ್ ಅವರು ಹೆತ್ತವರು,ಮೂವರು ಅಕ್ಕಂದಿರು ಮತ್ತು ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ. ಅಕ್ಕಂದಿರಿಗೆ ವಿವಾಹವಾಗಿದೆ. ಮುಸಾಭ್ ಕಳೆದ ವಾರವಷ್ಟೆ ಭಟ್ಕಳದ ಅಂಜುಮಾನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು.

ಮೃತ ನಝಾನ್ ಅವರು ಹೆತ್ತವರು,ತಮ್ಮ ಮತ್ತು ತಂಗಿಯನ್ನು ಅಗಲಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ದುಬೈಯಿಂದ ಊರಿಗೆ ಬಂದಿದ್ದರು. ದುಬೈಯಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಉದ್ಯೋಗದಲ್ಲಿದ್ದರು.

Comments are closed.