ಬೆಂಗಳೂರು: ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನವನ್ನು ದೇಶಾದ್ಯಂತ ಜನಸಾಮಾನ್ಯರು ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಚಿಂಟು ಅಣ್ಣ ರಕ್ಷಿತ್ ಶೆಟ್ಟಿಗೆ ರಾಕಿ ಕಟ್ಟಿ ಕಾಲು ಮುಗಿದಿದ್ದಾರೆ. ಈ ಮೂಲಕ ಅಣ್ಣನ ಆಶೀರ್ವಾದ ಪಡೆದು ಸಂತೋಷಪಟ್ಟಿದ್ದಾರೆ.
ರಕ್ಷಿತ್ ಶೆಟ್ಟಿ ಅವರ ಈ ಒಂದು ವಿಶೇಷ ಕ್ಷಣದ ಫೋಟೋಗಳಲ್ಲಿ ರಕ್ಷಿತ್ ಇಲ್ಲಿ ಸಹೋದರಿಗೆ ಸಿಹಿ ತಿನ್ನಿಸಿ ಹಾರೆಸಿದ್ದಾರೆ. ಪ್ರಗತಿ ಶೆಟ್ಟಿ ಕೂಡ ಅಣ್ಣನಿಗೆ ಆರತಿ ಮಾಡಿ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಸದ್ಯ ಈ ಸುಂದರ ಕ್ಷಣಗಳ ಫೋಟೋಗಳನ್ನು ಪ್ರಗತಿ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Comments are closed.