ಪ್ರಮುಖ ವರದಿಗಳು

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್; ಪುತ್ರಿ ಸುಹಾನ ಖಾನ್, ನಟಿ ನಯನತಾರಾ ಸಾಥ್

Pinterest LinkedIn Tumblr

ತಿರುಪತಿ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಚಿತ್ರ ಜವಾನ್ ತೆರೆಗೆ ಬರಲು ಸಜ್ಜಾಗಿದ್ದು ಸಿನಿಮಾದ ಯಶಸ್ಸಿಗಾಗಿ ಅವರು ಇಂದು (ಮಂಗಳವಾರ) ಆಂಧ್ರ ಪ್ರದೇಶದ ತಿರುಪತಿ ಬಾಲಾಜಿ ದೇವರ ದರ್ಶನ ಪಡೆದರು.

ಇದೇ ಸೆಪ್ಟೆಂಬರ್ 7ರಂದು ಜವಾನ್ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಜವಾನ್ ರಿಲೀಸ್‌ಗೂ ಮುನ್ನ ಪ್ರಮೋಷನ್‌ ಬ್ಯುಸಿಯಲ್ಲಿರುವ ನಟ ಇಂದು ನಸುಕಿನ ಜಾವ ಬಿಡುವು ಮಾಡಿಕೊಂಡು ತಮ್ಮ ಪುತ್ರಿ ಸುಹಾನ ಖಾನ್, ಚಿತ್ರದ ನಾಯಕಿ ಬಹುಭಾಷಾ ತಾರೆ ನಯನತಾರಾ ಮತ್ತು ತಮ್ಮ ಪರ್ಸನಲ್ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ತಿರುಪತಿಗೆ ಬಂದಿದ್ದರು.

ತಿಮ್ಮಪ್ಪನ ದರ್ಶನ ಪಡೆದು ಬಂದ ಶಾರುಖ್ ಖಾನ್ ಅಭಿಮಾನಿಗಳತ್ತ ಕೈ ಬೀಸಿ ತೆರಳಿದರು. ತಮಿಳಿನ ನಿರ್ದೇಶಕ ಅಟ್ಲಿ ಜವಾನ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

Comments are closed.