ಕುಂದಾಪುರ: ರಮೇಶ್ ಹೆಚ್ ಎಸ್. ಜೋಗಿ ಅವರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೆಟ್ ಪಡೆದ ಹಿರಿಮೆಗೆ ಪಾತ್ರರಾಗಿದ್ದಾರೆ.ಇವರು ಈ ಸಾಧನೆ ಮಾಡಲು ಒಂದು ತಂಡದೊಂದಿಗೆ ಸತತವಾಗಿ ಮೂರು ವರ್ಷ ಪ್ರಯತ್ನ ನಿರತರಾಗಿದ್ದು ಅಂತಿಮವಾಗಿ ಅವರ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಲಕ್ಷದ ನೂರು ಪುಟಗಳಿರುವ ಈ ಪುಸ್ತಕ ಪ್ರಪಂಚದಲ್ಲಿ ಅತೀ ಹೆಚ್ಚಿನ ಪುಟಗಳಿರುವ ಪುಸ್ತಕ ಎಂದು ದಾಖಲೆಗೆ ಪಾತ್ರವಾಗಿದೆ.
ಆ.27 ರಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪಡೆದುಕೊಂಡ ರಮೇಶ್ ಎಚ್.ಎಸ್ ಜೋಗಿ ಅವರ ಸಾಧನೆಯ ಮೂಲಕ ಸಾಧಕರ ಸಾಲಿನಲ್ಲಿ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆಯೂ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಸೇವೆಯನ್ನು ಗುರುತಿಸಿ ಹಲವು ಸಂಸ್ಥೆಗಳು ಅವರು ಗುರುತಿಸಿ ಗೌರವಿಸಿದೆ. ಇದರ ಜೊತೆಗೆ ಅವರದೇ ಆದ ಎಚ್. ಎಸ್. ಆರ್ ಪ್ರಕಾಶನದ ಮೂಲಕ ಮೌಲಿಕವಾದ ಕೃತಿಗಳನ್ನು ಪ್ರಕಟಿಸಿ ಪ್ರಕಾಶನ ಲೋಕಕ್ಕೂ ಲಗ್ಗೆ ಇಟ್ಟಿದ್ದಾರೆ. ಇತ್ತೀಚೆಗೆ ರಮೇಶ್ ಜೋಗಿ ಅವರು ಬರೆದ ನಾನು ಭಾರತೀಯ ಕೃತಿ ಬಿಡುಗಡೆ ಆಗಿದ್ದು ಈ ಕೃತಿಯಲ್ಲಿ ದೇಶಪ್ರೇಮದ ಮಹತ್ವದ ಬಗ್ಗೆ ಅವರು ವಿವರಿಸಿದ್ದಾರೆ.
ರಮೇಶ್ ಜೋಗಿ ಅವರ ಸಾಧನೆ ಸಮಾಜದ ನಡುವೆ ಇರುವ ಸಾಧಕ ಮನಸ್ಸುಗಳಿಗೆ ಇನ್ನಷ್ಟು ಪ್ರೇರಣೆ ನೀಡುವಂತಿದೆ.
Comments are closed.